ಕಿರುತೆರೆ ನಟಿ ವೈಷ್ಣವಿ ಗೌಡ ( Vaishnavi Gowda ) ನಿಶ್ಚಿತಾರ್ಥದ ವಿವಾದ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ವಿದ್ಯಾಭರಣ ವಿಷ್ಯವಾಗಿ ಸಾಕಷ್ಟು ಆರೋಪ ಕೇಳಿ ಬಂದ ಬೆನ್ನಲ್ಲೇ ವೈಷ್ಣವಿ ತಂದೆ ರವಿಕುಮಾರ್ ( RAVI KUMARA ) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ವಿದ್ಯಾಭರಣ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ನಟಿ ಮನವಿ ಮಾಡಿದ್ದರು. ಇದೀಗ ವೈಷ್ಣವಿ ತಂದೆ ರವಿಕುಮಾರ್ ಈ ಬಗ್ಗೆ ಮಾತನಾಡಿದ್ದಾರೆ. ನಮಗೂ ಈ ಬಗ್ಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ. ಇದೀಗ ಮದುವೆ ಕ್ಯಾನ್ಸಲ್ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಈ ಸಂಬಂಧವನ್ನು ಮುಂದುವರೆಸುವುದು ಬೇಡ ಎಂದು ಅನಿಸಿತು. ನಮಗೂ ಶಾಕ್ ಆಗಿದೆ. ವೈಷ್ಣವಿ ರೂಂ ನಿಂದ ಹೊರ ಬಂದಿಲ್ಲ. ತುಂಬಾ ಫೆಡ್ ಅಪ್ ಆಗಿದ್ದಾರೆ. ಇದನ್ನೂ ಓದಿ : – ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನ
ನಮಗೂ ಕೂಡ ಈ ಬಗ್ಗೆ ಮೊದಲೂ ಏನೂ ಗೊತ್ತಿರಲಿಲ್ಲ. ಆಡಿಯೋ ಬಗ್ಗೆ ಟಿವಿಯಲ್ಲಿ ನೋಡಿದಾಗ ಗೊತ್ತಾಗಿದ್ದು. ಆ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ. ಜನವರಿಯಲ್ಲಿ ಎಂಗೇಜ್ ಮೆಂಟ್ ಮಾಡಲು ತೀರ್ಮಾನ ಮಾಡಿದ್ದೇವು. ಸದ್ಯ ಇವಾಗ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೇವು. ಯಾರೋ ಆಗದೇ ಇರೋರು ಈ ರೀತಿ ಮಾಡಿರಬಹುದು. ಇದು ನನ್ನ ಮಗಳ ಜೀವನ. ಅವಳ ಸಂಪೂರ್ಣ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು ಎಂದು ವೈಷ್ಣವಿ ತಂದೆ ಮಾತನಾಡಿದ್ದಾರೆ.
ಇದನ್ನೂ ಓದಿ : – ಸಾದಲಿಯ ಶ್ರೀ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ