ಗುಜರಾತ್ ನಲ್ಲಿ ಆರಂಭದ ಪಂದ್ಯದಲ್ಲಿಯೇ ಜಡೇಜಾ ಪತ್ನಿ ರಿವಾಬಾ ಉತ್ತಮ ಪ್ರದರ್ಶನ

ಕ್ರಿಕೆಟಿಗ ರವೀಂದ್ರ ಜಡೇಜಾ ( RAVEENDRA JADEJA ) ಪತ್ನಿ ರಿವಾಬಾ ಜಡೇಜಾ, ( RIVAJA JADEJA ) ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದ ಮೊದಲ 'ಪಂದ್ಯ'ದಲ್ಲಿಯೇ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಕ್ರಿಕೆಟಿಗ ರವೀಂದ್ರ ಜಡೇಜಾ ( RAVEENDRA JADEJA ) ಪತ್ನಿ ರಿವಾಬಾ ಜಡೇಜಾ, ( RIVAJA JADEJA ) ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದ ಮೊದಲ ‘ಪಂದ್ಯ’ದಲ್ಲಿಯೇ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಉತ್ತರ ಜಾಮ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಿವಾಬಾ, ತಮ್ಮ ಸಮೀಪದ ಪ್ರತಿಸ್ಪರ್ಧಿ, ಆಮ್ ಆದ್ಮಿ ಪಕ್ಷದ ಕರ್ಶನ್ಭಾಯ್ ಪರ್ಬತ್ಭಾಯ್ ಕರ್ಮೂರ್ ಅವರನ್ನು 40,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಆರಂಭದ ಮತ ಎಣಿಕೆಯ ಕೆಲವು ಸುತ್ತುಗಳಲ್ಲಿ ರಿವಾಬಾ ಕೊಂಚ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರ ಪುಟಿದೆದ್ದ ಅವರು, ಭಾರಿ ಮುನ್ನಡೆ ಸಾಧಿಸಿದರು. ಅವರಿಗೆ ಅತ್ಯಂತ ನಿಕಟ ಪೈಪೋಟಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಪೇಂದ್ರಸಿನ್ಹ ಜಡೇಜಾ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಾಂಗ್ರೆಸ್ ( CONGRESS ) ಅಭ್ಯರ್ಥಿ ಪರ ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಜಡೇಜಾ ಪ್ರಚಾರ ನಡೆಸಿದ್ದರು. ಈ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿಗರಾಗಿದ್ದ ಜಡೇಜಾ ಕುಟುಂಬ, ರಿವಾಬಾ ಅವರ ಪರ ನಿಂತಿರಲಿಲ್ಲ. ಇದರಿಂದ ಇದು ಜಡೇಜಾ ಅವರ ಪತ್ನಿ ಮತ್ತು ಸಹೋದರಿ ನಡುವಿನ ಪೈಪೋಟಿ ಎಂದೇ ವಿಶ್ಲೇಷಿಸಲಾಗಿತ್ತು.

ಇದನ್ನು ಓದಿ : – ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಪ್ರಸ್ತುತ ನಾಯಕರು..? ಸಚಿವ ಅಶ್ವಥ್ ನಾರಯಣ್ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!