ನವರಸ ನಾಯಕ ಜಗ್ಗೇಶ್ ವೃತ್ತಿಜೀವನದಲ್ಲೇ ಹೊಸ ಮೈಲುಗಲ್ಲು ಎಂಬಂತ ಬಿಗ್ ಬಜೆಟ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಅದರಲ್ಲೂ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರಾದ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಬಿಗ್ ಬಜೆಟ್ ನಿರ್ದೇಶಕ ವಿಜಯ್ ಕಿರಂಗದೂರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಟಿಸಲಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನವರಸ ನಾಯಕ ಜಗ್ಗೇಶ್ ಒಂದಾಗ್ತಿದ್ದಾರೆ ಅನ್ನೋದೆ ಗಾಂಧಿನಗ್ರದಲ್ಲಿ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿತ್ತು.. ಈ ಬಿಸಿ ಬಿಸಿ ಚರ್ಚೆ ನಡಿತ್ತಿರುವಾಗ್ಲೇ ಚಿತ್ರದ ಪೋಸ್ಟರ್ ರಿವೀಲ್ ಮಾಡಿ, ಮತ್ತಷ್ಟು ಕಿಕ್ ಏರಿಸಿದೆ ಚಿತ್ರತಂಡ.. ನಿಜಕ್ಕೂ ಈ ಪೋಸ್ಟರ್ ನೋಡ್ತಿದ್ರೆ, ಸ್ಯಾಂಡಲ್‌ವುಡ್ ಮತ್ತೊಂದು ಹಿಟ್ ಚಿತ್ರಕ್ಕೆ ಸಾಕ್ಷಿಯಾಗೊದ್ರಲ್ಲಿ ನೋ ಡೌಟ್..
ರಾಘವೇಂದ್ರ ಸ್ಟೋರ್ಸ್ ಸಿನ್ಸ್ ೧೯೭೨ ಚಿತ್ರದ ಟೈಟಲ್ ಎಷ್ಟು ಕ್ಯಾಚಿ ಆಗಿದೆಯೋ ಅಷ್ಟೇ ಕಲರ್‌ಫುಲ್ ಆಗಿರುತ್ತೆ ಅನ್ನೊದ್ರಲ್ಲಿ ಯಾವುದೇ ಅನುಮಾನ ಇರೋದಿಲ್ಲಾ ಬಿಡಿ.. ಇನ್ನು ಈ ಪೋಸ್ಟರ್ ನೋಡ್ತಿದ್ರೆ ಔಟ್ ಅಂಡ್ ಔಟ್ ಕಾಮಿಡಿ ಜಾನರ್ ಸಿನಿಮಾ ಅನ್ನೋದು ಗೊತ್ತಾಗುತ್ತೆ, ಜಗ್ಗೇಶ್‌ರ ಖ್ಯಾತಿಗೆ ತಕ್ಕಂತೆ ನವರಸಗಳನ್ನೂ ಪೋಸ್ಟರ್‌ನಲ್ಲಿ ರಿವೀಲ್ ಮಾಡಿದೆ.
ಅಂದಹಾಗೆ ಈ ಚಿತ್ರ ಸಾಕಷ್ಟು ಸ್ಪೆಷಾಲಿಟಿಗಳಿಗೆ ಸಾಕ್ಷಿಯಾಗ್ತಿದೆ. ಇದು ಹೊಂಬಾಳೆ ನಿರ್ಮಾಣದ ೧೨ ನೇ ಚಿತ್ರವಾದ್ರೆ, ಜಗ್ಗೇಶ್ ಆ ಪ್ರೊಡಕ್ಷನ್‌ನಲ್ಲಿ ನಟಿಸ್ತಿರೋ ಮೊದಲ ವೆಂಚರ್. ಇನ್ನು, ಸಂತೋಷ್ ಆನಂದ್ ರಾಮ್ ಹಾಗು ಹೊಂಬಾಳೆಯಲ್ಲಿ ಮೂಡಿ ಬರ್ತಿರೋ ಹ್ಯಾಟ್ರಿಕ್ ಚಿತ್ರವಿದು. ಸದ್ಯ ಪ್ರೀಪ್ರೊಡಕ್ಷನ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ನವೆಂಬರ್ ೨೨ ರಿಂದ ಶೂಟಿಂಗ್ ಶುರು ಮಾಡಲಿದೆ. ಸದ್ಯ ನಾಯಕಿಯ ತಲಾಷ್‌ನಲ್ಲಿ ಚಿತ್ರತಂಡ ವಿದ್ದು, ಜಗ್ಗೇಶ್‌ಗೆ ಜೊತೆಯಾಗೋ ಅದೃಷ್ಟವಂತೆ ಯಾರೋ ಅನ್ನೋ ಕುತೂಹಲ ಸಹ ಗಾಂಧಿನಗರ ಮಂದಿಯದ್ದು.. ಒಟ್ನಲ್ಲಿ ವಿಶೇಷತೆಗಳಿಂದಲೇ ಸುದ್ದಿ ಮಾಡ್ತಿರೋ ಜಗ್ಗೇಶ್ ಹಾಗು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನ ರಾಘವೇಂದ್ರ ಸ್ಟೋರ್ಸ್ ಸಿಕ್ಕಾಪಟ್ಟೆ ಥ್ರಿಲ್ ಹೆಚ್ಚಿಸಿದೆ.