ರಾಜಕೀಯ (Politics) ದಲ್ಲಿ ಸಕ್ರಿಯವಾಗಬೇಕು ಎನ್ನುವ ಹಂಬಲ ಹೊಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan reddy) ಈ ಬಾರಿಯ ಚುನಾವಣೆಯಲ್ಲಿ ರಸಾಕಷ್ಟು ತಂತ್ರಗಾರಿಕೆ ಮಾಡಲು ಹೊರಟಿದ್ದಾರೆ.
ಉತ್ತರ ಕರ್ನಾಟಕ (Uttar karnataka) ಭಾಗದಲ್ಲಿ ಹಿಡಿತ ಸಾಧಿಸಬೇಕು ಎನ್ನುವ ಹಂಬಲ ಹೊಂದಿರುವ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಜನಾರ್ಧನ ರೆಡ್ಡಿ (Lakshmi aruna janardhan reddy) ಯವರನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 50 ಸಾವಿರಕ್ಕೂ ಅಧಿಕ ರೆಡ್ಡಿ ಜನಾಂಗದ ಮತಗಳನ್ನು ಹೊಂದಿದ್ದರಿಂದ ಪತ್ನಿಯನ್ನ ಈ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ರಾಯಚೂರು, ಬಳ್ಳಾರಿ, ವಿಜಯನಗರ, ಯಾದಗಿರಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ 2018ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಕಂಡಿರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಯೋಜನೆಯನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕದ 30 ಕ್ಷೇತ್ರಗಳಲ್ಲಿ ಪಕ್ಷೇತರರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಇದನ್ನು ಓದಿ : – ಬಿಜೆಪಿ ತೊರೆಯೋ ನಿರ್ಧಾರಕ್ಕೆ ಬಂದ್ರಾ ಹೆಚ್. ವಿಶ್ವನಾಥ್ ?
ಒಂದು ವೇಳೆ ಬಿಜೆಪಿ ರೆಡ್ಡಿಯವರನ್ನು ನಿರಾಕರಿಸಿದ್ರೆ ಸ್ವಂತ ಪಕ್ಷ ಕಟ್ಟುವ ಕೆಲಸಕ್ಕೆ ರೆಡ್ಡಿ ಮುಂದಾಗುವುದಿಲ್ಲ. ಶ್ರೀರಾಮುಲು ಸ್ವಂತ ಪಕ್ಷ ಕಟ್ಟಿ ಕೈ ಸುಟ್ಟುಕೊಂಡಿರುವುದರಿಂದ ಅದರ ಬದಲಾಗಿ ತಮ್ಮ ನೇತೃತ್ವದಲ್ಲಿ ಪಕ್ಷೇತರವಾಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ರೆಡ್ಡಿಯವರು ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : – ಪಕ್ಷದ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡುತ್ತಿದ್ದಾರೆ..! ಜಿ.ಪರಮೇಶ್ವರ್ ಅಚ್ಚರಿಯ ಹೇಳಿಕೆ