ಇಂಜಿನಿಯರಿಂಗ್ (Engineering) ಪ್ರವೇಶ ಪರೀಕ್ಷೆ (Entrance exam) ಜೆಇಇ (JEE) -ಮೇನ್‌ನಲ್ಲಿ ಕನಿಷ್ಠ 24 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಅಕ್ರಮ ವಿಧಾನಗಳನ್ನು ಬಳಸಿದ್ದಾರೆಂದು ಐದು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
ಜೆಇಇ- ಮುಖ್ಯ ಪರೀಕ್ಷೆಯ ಎರಡು ಸೆಷನ್ ಗಳ ಫಲಿತಾಂಶ ಸೋಮವಾರ ಪ್ರಕಟಿಸಲಾಗಿದೆ. ಶೇ. 100 ರಷ್ಟು ಅಂಕ ಗಳಿಸಿದ ಅಭ್ಯರ್ಥಿಗಳಲ್ಲಿ ಆಂಧ್ರ ಪ್ರದೇಶ (5) ಮತ್ತು ತೆಲಂಗಾಣ(5) ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ (Rajasthan) (4) ನಂತರದ ಸ್ಥಾನದಲ್ಲಿದೆ. ಹರಿಯಾಣ (Haryana) , ಮಹಾರಾಷ್ಟ್ರ (Maharastra) , ಅಸ್ಸಾಂ (Assam) , ಬಿಹಾರ, ಪಂಜಾಬ್, ಕೇರಳ, ಕರ್ನಾಟಕ, ಜಾರ್ಖಂಡ್‌ನಿಂದ ತಲಾ ಒಬ್ಬ ಅಭ್ಯರ್ಥಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಸಂಸ್ಥೆಯ ಅಧಿಕೃತ ವೆಬ್ಸೈಟ್ jeemain.nta.nic.in ನಲ್ಲಿ ಅಭ್ಯರ್ಥಿಗಳು ಫಲಿತಾಂಶ ನೋಡಬಹುದಾಗಿದೆ. ಆಗಸ್ಟ್ 3 ರಂದು ಜೆಇಇ ಮುಖ್ಯ ಪರೀಕ್ಷೆಯ ಕೀ ಆನ್ಸರ್ ಅನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ : – ಸುಪ್ರೀಂ ಕೋರ್ಟ್ ಮೇಲೆ ನನಗೆ ಯಾವುದೇ ಭರವಸೆ ಇಲ್ಲ- ಕಪಿಲ್ ಸಿಬಲ್