ಕೆಸಿವ್ಯಾಲಿ ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರಿನಲ್ಲಿ ಕೆಮಿಕಲ್ ಮಿಶ್ರಿತ ನೊರೆ ಕಾಣಿಸಿಕೊಂಡಿದೆ. ಕೆಸಿ ವ್ಯಾಲಿ ನೀರು,ಕೆರೆಗಳಿಗೆ ಹರಿಸಲಾಗುತ್ತಿರುವ ನೀರಿನಲ್ಲಿ ನೊರೆ ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಶುದ್ದೀಕರಣ ಮಾಡದೆ ಕಲುಷಿತ ನೀರು ಹರಿಸಲಾಗುತ್ತಿದೆ ಎಂದು ಸ್ಥಳೀಯರು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಕಳೆದ ವರ್ಷ ಉತ್ತಮ ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿದೆ. ನೊರೆ ಮಿಶ್ರಿತ ಕೆಸಿವ್ಯಾಲಿ ನೀರು ಕೆರೆಗಳಿಗೆ ಹರಿಯುತ್ತಿರುವುದರಿಂದ ಕೆರೆಗಳಲ್ಲಿ ಪರಿಸರ ಮಾಲಿನ್ಯ ಉಂಟಾಗುವ ಸಾಧ್ಯತೆಗಳಿವೆ. ಕೊಡಲೇ ಕೆಸಿ ವ್ಯಾಲಿಯ ಯೋಜನಾ ಅಧಿಕಾರಿಗಳು ನೀರನ್ನು ನಿಲ್ಲಿಸಿ ಶುದ್ಧೀಕರಣ ಮಾಡಿ ನಂತರ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ : – ಇದೇ ತಿಂಗಳು 28ಕ್ಕೆ ಹುಬ್ಬಳ್ಳಿ-ಧಾರವಾಡದ ಮೇಯರ್, ಉಪಮೇಯರ್ ಚುನಾವಣೆ ಫಿಕ್ಸ್