ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೋದರ ಕಿರಣ್ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.
ಸ್ವತಃ ಅರ್ಜುನ್ ಜನ್ಯ ಟ್ವಿಟರ್ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ನನ್ನ ಸೋದರ ಕಿರಣ್ (49) ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕಿರಣ್ ಮತ್ತು ಅರ್ಜುನ್ ಜನ್ಯ ಒಡನಾಟ ಉತ್ತಮವಾಗಿದ್ದು ಜನ್ಯ ಅವರ ಸ್ಟುಡಿಯೋವನ್ನು ಕಿರಣ್ ನೋಡಿಕೊಳ್ಳುತ್ತಿದ್ದರು.
ಎರಡು ವಾರದ ಹಿಂದೆ ಅರ್ಜುನ್ ಜನ್ಯ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಚಿಕಿತ್ಸೆ ನಂತರ ಚೇತರಿಸಿಕೊಂಡು ಕೆಲವು ದಿನಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು.