ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸ್ಪೋಟವಾಗುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ರಾತ್ರಿ ಕರ್ಪ್ಯೂ ಹಾಗೂ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಮಹತ್ತರದ ಆದೇಶ ಹೊರಡಿಸಿದೆ.
ಸರ್ವ ಪಕ್ಷಗಳ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಏಪ್ರಿಲ್ 21 ರಿಂದ ಮೇ 4 ರ ತನಕ ವೀಕ್ ಎಂಡ್ ಕರ್ಪ್ಯೂ ಜಾರಿಯಾಗಲಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೆ ಈ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.
ಏನೆಲ್ಲ ಬಂದ್?
- ಶಾಲಾ-ಕಾಲೇಜು ಸೇರಿ ಎಲ್ಲ ಶಿಕ್ಷಣ ಸಂಸ್ಥೆಗಳು
- ಬಾರ್ ಆಯಂಡ್ ರೆಸ್ಟೋರೆಂಟ್, ಹೋಟೆಲ್ಗಳು, ವೈನ್ ಸ್ಟೋರ್ಗಳು (ಪಾರ್ಸೆಲ್ ನೀಡಲು ಮಾತ್ರ ಅವಕಾಶ)
- ಸಿನಿಮಾ ಥಿಯೇಟರ್ಗಳು, ಮನರಂಜನಾ ಸ್ಥಳಗಳು, ಪಾರ್ಕ್ಗಳು, ಸ್ವಿಮ್ಮಿಂಗ್ ಫೂಲ್, ಜಿಮ್, ಶಾಪಿಂಗ್ ಮಾಲ್, ಕ್ರೀಡಾಂಗಣಗಳು
- ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸೇರಿ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ನಿಷೇಧ
- ದೇಗುಲಗಳು, ಚರ್ಚ್, ಮಸೀದಿಗಳಿಗೆ ಭಕ್ತರು ಭೇಟಿ ನೀಡುವಂತಿಲ್ಲ (ಅರ್ಚಕರು ಪೂಜೆ ಮಾಡಬಹುದು)
- ನೈಟ್ ಕರ್ಫ್ಯೂ ಜಾರಿಯಾದ ಮೇಲೆ ಸುಮ್ಮನೆ ಅಡ್ಡಾಡಿದರೆ ಕ್ರಮ
- ಖಾಸಗಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ನೀಡಲು ಸೂಚನೆ
ಏನೆಲ್ಲ ಇರುತ್ತವೆ?
- ಬ್ಯಾಂಕ್, ಎಟಿಎಂ ಸೇವೆಗಳು ಲಭ್ಯ
- ಬ್ಯೂಟಿಪಾರ್ಲರ್, ಸಲೂನ್ಗಳು ತೆರೆದಿರುತ್ತವೆ
ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಜನರು ಮಾತ್ರ ಡ್ಯೂಟಿ ಮಾಡಲು ಅವಕಾಶ - ಆಹಾರ-ಧಾನ್ಯ, ಅಗತ್ಯವಸ್ತುಗಳು, ಔಷಧ, ವೈದ್ಯಕೀಯ ಸೇವೆಗಳು ಲಭ್ಯ
- ರಾಜ್ಯದ ಒಳಗೆ ಪ್ರಯಾಣ ಮಾಡಬಹುದು
- ಮದುವೆಗೆ 50 ಜನರು, ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆ ಅವಕಾಶ
- ನಿರ್ಮಾಣ ಕಾಮಗಾರಿಗೆ ಅಡೆತಡೆಯಿಲ್ಲ
- ನೈಟ್ ಬಸ್, ರೈಲು ಪ್ರಯಾಣ ಮಾಡಬಹುದು.. ಹಾಗೇ ರಾತ್ರಿ ಪಾಳಿಯವರು ಐಡಿ ತೋರಿಸಬೇಕಾಗುತ್ತದೆ
ಇದರ ಹೊರತಾಗಿ ವೀಕೆಂಡ್ ಕರ್ಫ್ಯೂ ದಿನಗಳಲ್ಲಿ ಬೆಳಗ್ಗೆ 6 ರಿಂದ 10ಗಂಟೆ ಒಳಗೆ ಹಾಲು, ತರಕಾರಿ, ಹಣ್ಣು ಸೇರಿ ಅಗತ್ಯ ವಸ್ತುಗಳನ್ನು ಜನ ಖರೀದಿಸಬೇಕಾಗುತ್ತದೆ. ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸದವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.