ಈ ಕಾಲೇಜಿನ ಅಮೃತ ಮಹೋತ್ಸವಕ್ಕೆ ಕೇಂದ್ರ ಸಚಿವ ಅಮಿತ್ ಶಾ ಬಂದಿದ್ದಕ್ಕೆ ಖುಷಿಯಾಗುತ್ತಿದೆ. ನಾನು ಕೂಡ ಇದೇ ಭೂಮರೆಡ್ಡಿ ಕಾಲೇಜಿನಲ್ಲಿ ಓದಿದ್ದೇನೆ. ನವ ಭಾರತ ನಿರ್ಮಾಣದಲ್ಲಿ KLE ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ (BASAVRAJ BOMMAI) ಹೇಳಿದ್ದಾರೆ. ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಬಿ.ವಿ ಭೂಮರಡ್ಡಿ ತಾಂತ್ರಿಕ ವಿವಿ ಸುವರ್ಣ ಮಹೋತ್ಸವ, ಹುಬ್ಬಳ್ಳಿ. https://t.co/ZMNLlVQ3l1
— Basavaraj S Bommai (@BSBommai) January 28, 2023
ಡಬಲ್ ಇಂಜಿನ್ ಸರ್ಕಾರ ದೇಶ ಹಾಗೂ ನಾಡು ಕಟ್ಟಲು ಶ್ರಮಿಸುತ್ತಿದೆ. ಗೃಹ ಇಲಾಖೆಯಲ್ಲಿ ಅಮಿತ್ ಶಾ ಅಗಾಧ ಬದಲಾವಣೆ ತಂದಿದ್ದಾರೆ. ಮೋದಿ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯ ಜಾರಿಗೆ ತಂದಿದೆ. ಇಂದು ಕರ್ನಾಟಕಕ್ಕೆ ವಿಧಿ ವಿಜ್ಞಾನ ಕ್ಯಾಂಪಸ್ ಕೊಟ್ಟಿದ್ದು ಅಮಿತ್ ಶಾ. ಇದು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ. ಹೆಣ್ಣು ಮಕ್ಜಳಿಗಾಗಿ 700 ಕೋಟಿ ಹಣ ಕೊಟ್ಟಿದ್ದಾರೆ. ಅಮಿತ್ ಶಾ ಸಹಕಾರಿ ಸಚಿವರು, ಮುಂಬರುವ ದಿನದಲ್ಲಿ ಸಹಕಾರ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ ಎಂದು ಹೇಳಿದ್ರು. ಇದನ್ನು ಓದಿ :- AirCraft Crash- ವಾಯು ಸೇನೆಯ ಸುಖೋಯ್-30, ಮಿರಾಜ್ 2000 ವಿಮಾನ ಪತನ
ನಿಮ್ಮನ್ನ ನೋಡಿದರೆ ಹೊಟ್ಟೆ ಕಿಚ್ಚು ಆಗತ್ತೆ. ನಾನು ವೇದಿಕೆ ಮೇಲೆ ಕೂರುವ ಬದಲು, ವೇದಿಕೆ ಮುಂಭಾಗದಲ್ಲಿ ಕೂರಬೇಕಿತ್ತು. ಅಲ್ಲಿ ಕೂರುವ ಮಜಾ ಇಲ್ಲಿ ಬರಲ್ಲ. ಕ್ಯಾಂಪಸ್ ನೋಡಿದರೆ ನಾವು ಇವಾಗ ಇಲ್ಲಿ ವಿದ್ಯಾರ್ಥಿಗಳು ಆಗಬೇಕಿತ್ತು ಎಂದು ಅನಿಸುತ್ತಿದೆ. ನಾವು ಕಲಿಯುವಾಗ ಕಾಲೇಜ್ ನಲ್ಲಿ, ಸಿವಿಲ್, ಮೆಕ್ಯಾನಿಕಲ್ ಬಿಟ್ಟರೇ ಏನೂ ಇರಲಿಲ್ಲ. ಕ್ಯಾಂಟಿನ್ ನಮ್ಮ ಫೇವರೇಟ್ ಪ್ಲೇಸ್ ಎಂದು ತಮ್ಮ ಕಾಲೇಜು ದಿನಗಳನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.
ಇದನ್ನು ಓದಿ :- ಬಾದಾಮಿ, ಚಾಮುಂಡಿ ಬಿಟ್ಟು ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿದ್ದ್ಯಾಕೆ..? ಈಶ್ವರಪ್ಪ ಪ್ರಶ್ನೆ