ಕೇರಳದ ಪದ್ಮನಾಭಸ್ವಾಮಿ ದೇವಾಲಯ ಟ್ರಸ್ಟ್ನ ಆದಾಯ ಮತ್ತು ವೆಚ್ಚದ ಕುರಿತು 25 ವರ್ಷಗಳ ಲೆಕ್ಕಪತ್ರ ಪರಿಶೋಧನೆಗೆ ಸುಪ್ರೀಂಕೋರ್ಟ್ ಸೂಚಿಸಿದೆ.
ಖ್ಯಾತ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಸಂಪೂರ್ಣ ಖರ್ಚು ವೆಚ್ಚಗಳ ವಿವರಗಳನ್ನು ಮೂರು ತಿಂಗಳ ಒಳಗಾಗಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ ಮೂಲಕ ಆಡಿಟ್ ನಿಂದ ವಿನಾಯಿತಿ ನೀಡಬೇಕು ಎಂದು ಕೋರಿದ್ದ ಟ್ರಸ್ಟ್ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪದ್ಮನಾಭಸ್ವಾಮಿ ದೇವಾಲಯದ ಉಸ್ತುವಾರಿ ಹೊಂದಿದ್ದ ಟ್ರಾವೆಂಕೂರ್ ರಾಜಮನೆತನ ಹಾಗೂ ಟ್ರಸ್ಟ್ ವ್ಯವಹಾರಗಳು ಕೂಡ ಪರಿಶೀಲನೆಗೆ ಒಳಪಡಲಿದೆ. ಟ್ರಸ್ಟ್ ಲೆಕ್ಕಪತ್ರ ಮಾತ್ರ ಪರಿಶೀಲಿಸಿ ರಾಜಮನೆತನವನ್ನು ಪರಿಗಣಿಸದಂತೆ ಟ್ರಸ್ಟ್ ಮನವಿ ಮಾಡಿತ್ತು.