ಕೆ.ಜಿ.ಎಫ್ 2 (KGF) ದಿನದಿಂದ ದಿನಕ್ಕೆ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸದ್ಯ ಎಲ್ಲಾ ಭಾಷೆಯ ಸಿನಿಮಾ ಕಲೆಕ್ಷನ್ ನಿಂತಿರೋ ರಾಕಿಭಾಯ್ ಸಿನಿಮಾ ಇದೀಗ 1200 ಕೋಟಿ ಗಳಿಕೆ ಮಾಡುತ್ತ ಕೆಜಿಎಫ್ 2′ ಚಿತ್ರ ಮುನ್ನುಗ್ಗುತ್ತಿದೆ.
ಬಾಲಿವುಡ್ ಬಾಕ್ಸ್ಆಫೀಸ್ ಅಡ್ಡಾದಲ್ಲಿ ಘಟಾನುಘಟಿಗಳ ಸ್ಟಾರ್ ಚಿತ್ರಗಳನ್ನೇ ಹಿಂದಿಕ್ಕಿ ಯಶ್ ಸಿನಿಮಾ, ಯಶಸ್ವಿಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಿದೆ. ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೆ ವಿಶ್ವದ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಇದನ್ನೂ ಓದಿ :- ಕೆಜಿಎಫ್-2 1000 ಕೋಟಿ ದಾಖಲೆ- ಟೀಸರ್ ಮೂಲಕ ಅಧಿಕೃತ ಮುದ್ರೆ ಒತ್ತಿದ ಹೊಂಬಾಳೆ
ಈಗಾಗಲೇ ಚಿತ್ರ ವರ್ಲ್ಡ್ ವೈಡ್ ಕಲೆಕ್ಷನ್ 1160 ಕೋಟಿ ಬಾಚಿ, 1200 ಕೋಟಿ ಕಲೆಕ್ಷನ್ ಮಾಡುತ್ತ ಯಶ್ ಚಿತ್ರ ಮುನ್ನುಗ್ಗುತ್ತಿದೆ.
ಕೆಜಿಎಫ್ 2′ ಚಿತ್ರ ರಿಲೀಸ್ ಆಗಿ 25 ದಿನಗಳು ಪೂರೈಸಿದ್ದರು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಕಲೆಕ್ಷನ್ ಎಲ್ಲೂ ಕುಗ್ಗದೇ ಈ ಚಿತ್ರದ ಮುಂದೆ ಅದ್ಯಾವುದೇ ಹೊಸ ಸಿನಿಮಾ ಬಂದ್ರು ಗಟ್ಟಿ ಪೈಪೋಟಿ ನೀಡುತ್ತಾ ಸಾಗುತ್ತಿದೆ. ತಮಿಳಿನ ಬೀಸ್ಟ್’, ಹಿಂದಿಯ
ರನ್ವೇ 24′, ಜೆರ್ಸಿ’,
ಕೆಜಿಎಫ್ 2′ ಮುಂದೆ ತೆರೆಕಂಡರೂ ಪೈಪೋಟಿ ಗೆಲ್ಲಲು ಸಾಧ್ಯವಾಗಲಿಲ್ಲ. ಈಗ ಹಾಲಿವುಡ್ನ ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಚಿತ್ರ ತೆರೆಕಂಡರೂ
ಕೆಜಿಎಫ್ 2′ ಚಿತ್ರ ಭಾರೀ ಕಲೆಕ್ಷನ್ ಮಾಡುತ್ತಿದೆ.
ಇದನ್ನೂ ಓದಿ :- ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್