ರಾಕಿಂಗ್ ಸ್ಟಾರ್ ಯಶ್ ವೃತ್ತಿಜೀವನದ ದಿಕ್ಕೆನ್ನೇ ಬದಲಿಸಿದ ಕೆಜಿಎಫ್ 2′ ಸಿನಿಮಾ. ದಿನದಿಂದ ದಿನಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಹೈಪ್ ಕ್ರಿಯೇಟ್ ಮಾಡ್ತಿದೆ.
ಬರೋಬ್ಬರಿ ಒಂದು ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಸಿನಿರಂಗದಲ್ಲಿ ಯಶ್ ಚಿತ್ರ ದಾಖಲೆ ಬರೆದಿದೆ. ಇದೀಗ ಟೀಸರ್ ಮೂಲಕ ಹೊಂಬಾಳೆ ಬ್ಯಾನರ್ 1 ಸಾವಿರ ಕೋಟಿ ಕಲೆಕ್ಷನ್ ಕುರಿತು ಸಂಭ್ರಮ ಹಂಚಿಕೊಂಡಿದೆ.
ಇದನ್ನೂ ಓದಿ :- ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್
ನ್ಯಾಷನಲ್ ಸ್ಟಾರ್ ಯಶ್ ನಟನೆಯ
ಕೆಜಿಎಫ್ 2 ನರಾಚಿ ಅಧಿಪತಿ ಕಥೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸಾಫೀಸ್ ನಲ್ಲೂ ಈಗಾಗಲೇ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಇದೀಗ ಹೊಂಬಾಳೆ ಟೀಮ್ ಆಫಿಷಿಯಲ್ ಆಗಿ ಯಶ್ ಇರುವ ಚಿತ್ರದ ಸಣ್ಣ ತುಣುಕಿನೊಂದಿಗೆ ಟೀಸರ್ ಮೂಲಕ ಸಾವಿರ ಕೋಟಿಯ ಕಲೆಕ್ಷನ್ ಸಂಭ್ರಮ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :- ನಿಲ್ಲದ ರಾಕಿಭಾಯ್ ಆರ್ಭಟ – 400 ಕೋಟಿಯತ್ತ KGF-2