ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ( Mohammed bin Salman ) ಅವರನ್ನು ಪ್ರಧಾನಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ. ಹಲವಾರು ವರ್ಷಗಳಿಂದ ಸಲ್ಮಾನ್ ಸೌದಿ ಸಾಮ್ರಾಜ್ಯದ ವಾಸ್ತವಿಕ ಆಡಳಿತಗಾರರಾಗಿದ್ದರು. ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವರಾಗಿದ್ದರು.
ಈ ಹಿಂದೆ ಉಪ ರಕ್ಷಣಾ ಸಚಿವರಾಗಿದ್ದ ಖಾಲಿದ್ ಬಿನ್ ಸಲ್ಮಾನ್ ರಕ್ಷಣಾ ಸಚಿವರಾಗಿದ್ದಾರೆ. ಖಾಲಿದ್ ಬಿನ್ ಸಲ್ಮಾನ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಕಿರಿಯ ಸಹೋದರ. ಆಂತರಿಕ, ವಿದೇಶ ಮತ್ತು ವಿದ್ಯುತ್ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಯುವರಾಜ ಸಲ್ಮಾನ್ ವಹಿಸಲಿದ್ದಾರೆ. 37ಹರೆಯದ ಯುವರಾಜ ಮೊಹಮ್ಮದ್ 2017ರಿಂದ ಉತ್ತರಾಧಿಕಾರಿಯಾಗುವ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರು. 2015ರಲ್ಲಿ ಅವರು ರಕ್ಷಣಾ ಸಚಿವರಾಗಿದ್ದು, ಇದು ಪ್ರಮುಖ ಖಾತೆಗಳ ಜವಾಬ್ದಾರಿ ವಹಿಸುವಲ್ಲಿ ಅವರ ಪ್ರಮುಖ ಹೆಜ್ಜೆಯಾಗಿತ್ತು.
ಇದನ್ನೂ ಓದಿ : – ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು