ಚಿಕ್ಕಮಗಳೂರು. ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮದಗದಕೆರೆ ಕೋಡಿಬಿದ್ದಿದೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದ ಬಳಿ ಇರುವ ಮದಗದಕೆರೆ ಕೋಡಿ ಬಿದ್ದಿದ್ದರಿಂದ ರೈತರಲ್ಲಿ ಹರ್ಷ ಮನೆ ಮಾಡಿದೆ. ಬಯಲುಸೀಮೆ ಭಾಗದ ರೈತರ ಜೀವನಾಡಿಯಾಗಿರೋ ಕೆರೆ ಇದಾಗಿದೆ.
ಶ್ರೀ ರಾಮ- ಲಕ್ಷ್ಮಣ ದೇವಾಲಯ ಮುಳುಗಡೆ
ರಾಮ- ಲಕ್ಷ್ಮಣ ದೇವಾಲಯಕ್ಕೆ ಹೋಗುವ ದಾರಿ ಬಂದ್ ಆಗಿದ್ದು ದೇವಾಲಯದ ಆವರಣ ಸಂಪೂರ್ಣ ಜಲಾವೃತವಾಗಿದೆ. ಇದು ಹಂಪಿಯಲ್ಲಿರೋ ಶ್ರೀ ರಾಮ- ಲಕ್ಷ್ಮಣ ದೇವಾಲಯ .ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶದಿಂದ ನದಿಗೆ ನೀರು ಹರಿಸಲಾಗಿದೆ.
1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ನಿನ್ನೆ ಪುರಂದರ ಮಂಟಪ, ಕರ್ಮ ಮಂಟಪಗಳು ಮುಳುಗಡೆ ಆಗಿದ್ದವು. ಇಂದು ದೇವಾಲಯದ ಧ್ವಜ ಸ್ಥಂಬದವರೆಗೆ ಬಂದ ನೀರು ಬಂದಿದೆ.
ತುಂಗಭದ್ರೆಗೆ ಬಾಗೀನ ಅರ್ಪಿಸಿದ ಆನಂದ್ ಸಿಂಗ್
ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯನಗರ ಶಾಸಕ, ಸಚಿವ ಆನಂದ್ ಸಿಂಗ್ ರಿಂದ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ್ರು. ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗಿಯಾಗಿದ್ರು. ಇದನ್ನು ಓದಿ : – ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವ ಪತನ ಕಾಣಲಿದೆ – ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭವಿಷ್ಯ
ಅಬ್ಬರಿಸುತ್ತಿದೆ ದೂದ್ ಗಂಗಾ ನದಿ
ಉತ್ತರ ಕರ್ನಾಟಕದಲ್ಲಿ ದೂದ್ ಗಂಗಾ ನದಿ ತುಂಬಿಹರಿಯುತ್ತಿದೆ. ದೂದ್ ಗಂಗಾ ನದಿಯಲ್ಲಿ ೨೭೦೦೦ ಕ್ಯೂಸೆಕ್ ನೀರಿನ ಒಳಹರಿವು ಇದೆ. ಕಾರಗದಾ ಗ್ರಾಮದ ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮ.
ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನದೊಳಗೆ ನೀರು ನುಗ್ಗಿದ್ದು ಸಾರ್ವಜನಿಕರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಪೋಲಿಸ್, SDRF ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾಯ ಪ್ರದೇಶಗಳಿಗೆ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿ : – ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ – ಸಿಎಂ ಬೊಮ್ಮಾಯಿ