ಬೆಂಗಳೂರು : ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಮುಷ್ಕರದಿಂದ ಸಾರಿಗೆ ಇಲಾಖೆಗೆ 51 ಕೋಟಿ ರೂ ನಷ್ಟವಾಗಿದೆ. 6ನೇ ವೇತನ ಆಯೋಗ ಜಾರಿಗೆ ಪಟ್ಟು ಹಿಡಿದು ಸಾರಿಗೆ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾರಿಗೆ ಸಂಸ್ಥೆಯ 4 ನಿಗಮಗಳಿಂದ 51 ಕೋಟಿ ರೂ ನಷ್ಟವಾಗಿದೆ.
ಕಳೆದ ಮೂರು ದಿನದಿಂದ ಕೆಎಸ್ಆರ್ಟಿಸಿಗೆ 21 ಕೋಟಿ, ಪ್ರತಿನಿತ್ಯ ಕೆಎಸ್ ಆರ್ಟಿಸಿಗೆ 7 ಕೋಟಿ ರೂ ಆದಾಯ ಬರುತ್ತಿತ್ತು. ಬಿಎಂಟಿಸಿಗೆ 9 ಕೋಟಿ ನಷ್ಟವಾಗಿದ್ದು ಬಿಎಂಟಿಸಿ ನಿತ್ಯ 3 ಕೋಟಿ ರೂ ಆದಾಯ ಬರುತ್ತಿತ್ತು.
ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ,10.5 ಕೋಟಿ ನಷ್ಟವಾಗಿದೆ. ಈಶಾನ್ಯ ಸಾರಿಗೆ ನಿಗಮ ಕ್ಕೆ10,5 ಕೋಟಿ ನಷ್ಟವಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ