ಕುಮಾರಸ್ವಾಮಿ ಒಬ್ಬ ಬ್ಲಾಕ್ ಮೇಲ್ ರಾಜಕಾರಣಿ – ಮಾಜಿ ಸಚಿವ ಸಿ. ಪಿ.ಯೋಗೇಶ್ವರ್ ವಾಗ್ದಾಳಿ

ಮಾಜಿ ಸಿಎಂ ಹೆಚ್ ಡಿಕೆ ವಿರುದ್ಧ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ (CP.Yogeshwar) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ (Channapatna) ದಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ (Kumarswamy) ಬಹಳ ಲೇವಡಿಯಾಗಿ ಮಾತನಾಡಿದ್ದಾರೆ. ಎಲ್ಲರ ಬಗ್ಗೆ ತೇಜೋವಧೆ ಮಾಡುತ್ತಾರೆ. ಈ ಭಾಗದ ಯಾವುದೇ ನಾಯಕರನ್ನ ಬಿಡುವುದಿಲ್ಲ. ಸರ್ವ ಶ್ರೇಷ್ಠ ರಾಜಕಾರಣಿ ಎಲ್ಲರ ಬಗ್ಗೆ ಮಾತನಾಡುತ್ತಾರೆ ಎಂದು ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

ವೈಯಕ್ತಿಕ ವಿಚಾರಗಳನ್ನ ಮಾತನಾಡುತ್ತಾರೆ. ಈ ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದೆ. ಕುಮಾರಸ್ವಾಮಿ ಅವರೇ ನಿಮ್ಮದು ಅತೀ ಆಯ್ತು. ಹದ್ದು ಮೀರಿ ಮಾತನಾಡುತ್ತಿದ್ದೀರಿ ಗೌರವಯುತವಾಗಿ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ವಾರ್ನ್ ಮಾಡಿದ್ದಾರೆ. ಟೀ ಮಾರುತ್ತಿದ್ದರು ಈ ದೇಶದ ಪ್ರಧಾನಿ ಆಗಿದ್ದಾರೆ. ಅಪ್ಪ ಏನೋ ಆದ ಅಂತ ಮಗನೂ ಏನೋ ಆಗಬೇಕು ಅಂತ ಇಲ್ಲ. ಕುಮಾರಸ್ವಾಮಿ ವಿರುದ್ಧ ಅಂಕಿ ಅಂಶ ಸಮೇತ ಮತ್ತೊಂದು ದಿನ ಮಾತನಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಹಿನ್ನೆಲೆ ಬೇರೆ ಇರಬಹುದು. ಕುಮಾರಸ್ವಾಮಿ ಅವರಿಗೆ ನೆನಪಿಸುತ್ತೇನೆ ನಾನು ಶಾಸಕನಾಗಿದ್ದಾಗ ಕುಮಾರಸ್ವಾಮಿ ಬನಶಂಕರಿ (Banashankari) ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಇದನ್ನೂ ಓದಿ : –  ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ, ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಶ್ರಮಿಸುತ್ತೇನೆ -ನಿತೀಶ್ ಕುಮಾರ್

ಈ ವೇಳೆ ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಬ್ಲಾಕ್ ಮೇಲ್ ಮಾಡುತ್ತಾರೆ. ನಾನು ಅವಾಗ ಡೆವಲಪರ್ ಆಗಿದ್ದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದೆ. ಭೂ ಪರಿವರ್ತನೆಗೆ ಅನುಮತಿ ಕೊಡಿಸುವುದಿಲ್ಲ. ನೈಸ್ ಕಂಪನಿಗೆ ನನ್ನ ಜಾಗ ಒತ್ತುವರಿ ಮಾಡಿಸುತ್ತಾರೆ. ಈ ರೀತಿ ಸಾಕಷ್ಟು ಕಿರುಕುಳ ಕೊಡುತ್ತಾರೆ. ನನಗೆ ಸಾಕಷ್ಟು ಬ್ಯಾಕ್ ಮೇಲ್ ಮಾಡುತ್ತಾರೆ. ಇದು ಮೂವತ್ತು ವರ್ಷದ ಹಿಂದಿನ ಕಥೆ. ಸಾಕಷ್ಟು ಜನ ಸಾಕ್ಷಿಯಾಗಿ ಇನ್ನು ಬದುಕಿದ್ದಾರೆ.

ನನಗೆ ಕಳಂಕ ಬರಲು ಇದೇ ಕುಮಾರಸ್ವಾಮಿ ಕುಟುಂಬ ಕಾರಣ. ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದವನು ನೀರಾವರಿ ತಜ್ಞನಾ ಎಂದು ಪ್ರಶ್ನೆ ಮಾಡುತ್ತಾರೆ. ನೀರಾವರಿಗೆ ಚನ್ನಪಟ್ಟಣ ತಾಲ್ಲೂಕಿಗೆ ಒಂದು ಪೈಸಾ ಕೊಡುಗೆ ಇಲ್ಲ. ಸಾಕಷ್ಟು ಯೋಜನೆಗಳನ್ನ ನಾನು ಮಾಡಿಸಿಕೊಂಡು ಬಂದಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ. ನಾನು ಬಾಳೆ ಕಂದು ಕಡಿದು ವ್ಯಾಪಾರ ಮಾಡಿದ್ದೇನೆ. ನನ್ನ ಬಗ್ಗೆ ಕೀಳಾಗಿ ಮಾತನಾಡಬೇಡಿ ಮೋದಿ ಅವರ ಬಗ್ಗೆ ಇಡೀ ಪ್ರಪಂಚ ಮಾತನಾಡುತ್ತಿದೆ. ಮೋದಿ ಅವರಿಗೆ ಯಾವ ಹಿನ್ನೆಲೆ ಏನು ಇತ್ತು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : –  ಪರೇಶ್ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ಅಕ್ಷಮ್ಯ- ಸಿದ್ದರಾಮಯ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!