ಪಠ್ಯ ಪುಸ್ತಕದಲ್ಲಿ ಕುವೆಂಪುಗೆ ಅವಮಾನ ಆರೋಪ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ (Sadananda gowda) ಪ್ರತಿಕ್ರಿಯೆ ನೀಡಿದ್ದಾರೆ. ಕುವೆಂಪು (Kuvempu) ಕುರಿತಂತೆ ಪಠ್ಯದಲ್ಲಿ ಹೆಚ್ಚಿನ ವಿಚಾರ ಸೇರಿಸಿದ್ದು ಬಿಜೆಪಿ (BJP) .
ಕುವೆಂಪು ಅವರ ಎರಡು ಕವನವನ್ನ ನಾಡಗೀತೆ ಮಾಡಿದ್ದು ಬಿಜೆಪಿ. ಹಾಗಾಗಿ ನಾವು ಅಪಮಾನ ಮಾಡಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ. ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಲು ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದ್ರು.
ದೇವೇಗೌಡರ ಪತ್ರ ವಿಚಾರ
ಪಠ್ಯ ಕುರಿತು ದೇವೇಗೌಡರ ಜೊತೆ ಮಾತನಾಡೋದಕ್ಕೆ ಸಿಎಂ ಹಾಗೂ ಶಿಕ್ಷಣ ಸಚಿವರು ತಯಾರಿದ್ದಾರೆ. ಆದರೇ ದೇವೇಗೌಡ (Devegowda) ರೇ ಮಾತನಾಡೋಕೆ ಬಾರದೇ ಮಾರ್ಗದಲ್ಲಿ ಕುಳಿತುಕೊಳ್ತೇನೆ ಅಂದರೇ ಹೇಗೆ. ಎಲ್ಲವೂ ರಾಜಕೀಯ ಪ್ರೇರಿತವಾಗಿರಬಾರದು. ಈಗಾಗಲೇ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ನಾವು ಯಾವುದರಲ್ಲೂ ರಾಜಕಾರಣ ತುರುಕಿ, ಬೆಳಯುವಂತಾ ಮಕ್ಕಳ ಮನಸ್ಸನ್ನ ಹಾಳು ಮಾಡಲ್ಲಾ. ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು ಎಂದು ಹೇಳಿದರು. ಇದನ್ನೂ ಓದಿ : – ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರನಿಗೆ BBMP 3 ಲಕ್ಷ ರೂ. ದಂಡ..!
ಇದೇ ವೇಳೆ ಪರದೇಶದ ಶಿಕ್ಷಣ (Foreign education) ಪದ್ಧತಿಯಿಂದ ನಾವು ಹೊರಬರಲೇಬೇಕು. ಮೆಕಾಲೆ ಆಧಾರಿತ ಶಿಕ್ಷಣ ಪದ್ದತಿಯನ್ನ ಭಾರತೀಯ ಶಿಕ್ಷಣ (Indian education) ಪದ್ದತಿಯಾಗಿ ಬದಲಾಯಿಸಬೇಕು. ಹಾಗಂತ ನಾನು ಗುರುಕುಲ ಶಿಕ್ಷಣ ಪದ್ದತಿ ಬೇಕು ಅಂತಾ ಹೇಳುತ್ತಿಲ್ಲಾ. ಭಾರತೀಯ ಸಂಸ್ಕೃತಿಯ ಮೂಲ ಬೇರಿನೊಂದಿಗೆ ನಮ್ಮ ಶಿಕ್ಷಣ ಪದ್ದತಿ ಸಾಗಬೇಕು ಎಂದು ಹೇಳಿದರು.
ಅಗ್ನಿಪಥ್ ವಿರುದ್ದ ಕಾಂಗ್ರೆಸ್ ಹೋರಾಟ ವಿಚಾರ
ಕಾಂಗ್ರೆಸ್ ಗೆ ಹೋರಾಟ ಮಾಡಲು ಬೇರೆ ವಿಚಾರವಿಲ್ಲಾ. ಹಾಗಾಗಿ ಹೋರಾಟ ಮಾಡ್ತಿದ್ದಾರೆ. ಅಗ್ನಿಪಥ್ (Agnipath) ನಲ್ಲಿ ಭಾಗಿಯಾದ ಯುವಕರಿಗೆ ಮಹೇಂದ್ರ (Mahendra) , ಅದಾನಿ (Adhani) ಸೇರಿ ಖಾಸಗಿ ಕಂಪನಿಗಳು (Private company) ಉದ್ಯೋಗ ಮೀಸಲಿಡ್ತೇವೆ ಎಂದಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ತಕ್ಷಣ ಮಿಲಿಟರಿ ವ್ಯವಸ್ಥೆ ಬದಲಾಗಲ್ಲಾ. ಮೂಲ ವ್ಯವಸ್ಥೆ ಹಾಗೆಯೇ ಇರುತ್ತೆ ಎಂದು ಹೇಳಿದರು.
ಇದೇ ವೇಳೆ ED ಅವರು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲಾ. ಕಾಂಗ್ರೆಸ್ (Congress) ನವರಿಗೆ ಸಂವಿಧಾನಿಕ ಸಂಸ್ಥೆ ಮೇಲೆ ನಂಬಿಕೆ ಇಲ್ಲಾ. ಹಾಗಾಗಿ ಅವರು ಇಡಿ ಮೇಲೆ ಆರೋಪ ಮಾಡ್ತಿದ್ದಾರೆ. ಮೋದಿ (Modi) ಅವರು ಗುಜರಾತ್ ಸಿಎಂ ಆಗಿದ್ದಾಗ SIT ಮುಂದೆ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ (Supreme court) ನಿಂದ ಇಂದು ಆರೋಪ ಮುಕ್ತರಾಗಿದ್ದಾರೆ ಎಂದು ತುಮಕೂರಿನಲ್ಲಿ ಸದಾನಂದಗೌಡ ತಿಳಿಸಿದ್ದಾರೆ.
ಇದನ್ನೂ ಓದಿ : – ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಗೆಲ್ಲಿಸಿ ಕಳುಹಿಸುತ್ತೇವೆ – ಶಾಸಕ ಕೆ.ಶ್ರೀನಿವಾಸಗೌಡ