ಮೈಸೂರಿ (Mysuru) ನ ನರಸೀಪುರ ತಾಲ್ಲೂಕಿನಲ್ಲಿ ಒಂದೇ ತಿಂಗಳಿನಲ್ಲಿ ಚಿರತೆ (Leopard) ದಾಳಿಗೆ ಇಬ್ಬರು ವಿದ್ಯಾರ್ಥಿ (Students) ಗಳು ಬಲಿಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಚಿರತೆಗಳ ಹಾವಳಿ ಹೆಚ್ಚಾಗಿದೆ. ಸಕಾಲದಲ್ಲಿ ಕಬ್ಬು ಕಟಾವು ಮಾಡಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ. ತಾಲ್ಲೂಕಿನ 20 ಪಂಚಾಯಿತಿಯ 40ಗ್ರಾಮಗಳಲ್ಲಿ ಕಬ್ಬು ಕಟಾವಿಗೆ ಕೆ.ವಿ.ರಾಜೇಂದ್ರ ವಿಶೇಷ ಅನುಮತಿ ನೀಡಿದ್ದಾರೆ. ಡ್ರೋಣ್ ಕ್ಯಾಮೆರಾ ಬಳಸಿ ಚಿರತೆ ವಾಸಿಸುವ ಸ್ಥಳವನ್ನು ಅರಣ್ಯ ಇಲಾಖೆ ಕಂಡು ಹಿಡಿದಿದೆ. ಕಬ್ಬಿನ ಗದ್ದೆಯಲ್ಲಿ ಚಿರತೆಗಳು ವಾಸಿಸುತ್ತಿವೆ. ಇದನ್ನೂ ಓದಿ : – ಚಿತಾವಣೆಗೆ ಹೆದರುವ ಮಗ ನಾನಲ್ಲ ! ಎಸ್.ಆರ್.ಶ್ರೀನಿವಾಸ್ ವಿರುದ್ಧ ಗುಡುಗಿದ ಹೆಚ್ಡಿಕೆ
ಚಿರತೆ ಸೆರೆಗೆ ಕಬ್ಬು ಕಟಾವು ಮಾಡದಿರುವುದು ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಕಬ್ಬು ಕಟಾವು ಮಾಡಲು ಅರಣ್ಯ ಇಲಾಖೆ ಮನವಿ ಮಾಡಿದೆ. ಅರಣ್ಯ ಇಲಾಖೆ ಮನವಿಯಂತೆ ಕಬ್ಬು ಕಟಾವಿಗೆ ಡಿಸಿ ಕೆ.ವಿ.ರಾಜೇಂದ್ರ ಆದೇಶ ನೀಡಿದ್ದಾರೆ.
ಇದನ್ನೂ ಓದಿ : – ಗುಬ್ಬಿಯಲ್ಲಿ ಹೆಚ್ಡಿಕೆಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ……