ಬೆಳಗಾವಿ ( belgavi ) ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ, ಚಿರತೆ ಸೆರೆ ಕಾರ್ಯಾಚರಣೆ 25ನೇ ದಿನಕ್ಕೆ ಕಾಲಿಟ್ಟಿದೆ. 6 ದಿನ ಆನೆಗಳಿಂದ ಹುಡುಕಿದ್ರೂ ಚಿರತೆ ಸೆರೆಯಾಗಿಲ್ಲ.
ಇಂದು 9 ಜನ ಸಿಬ್ಬಂದಿ, ಜೆಸಿಬಿ, ಆನೆಗಳಿಂದ ಚಿರತೆ ಸೆರೆಗೆ ಪ್ಲ್ಯಾನ್ ಮಾಡಲಾಗಿದೆ. ಪ್ರತಿದಿನ 250 ಎಕರೆ ಪ್ರದೇಶದಲ್ಲಿರುವ ಗಾಲ್ಫ್ ಮೈದಾನವನ್ನು ಸಿಬ್ಬಂದಿ ಶೋಧ ಮಾಡುತ್ತಿದ್ದಾರೆ. ಚಿರತೆ ಸೆರೆಯಾಗದ ಹಿನ್ನೆಲೆ 2 ದಿನಗಳಿಂದ ಹನಿಟ್ರ್ಯಾಪ್ ಅಸ್ತ್ರ ಪ್ರಯೋಗ ಮಾಡಲಾಗುತ್ತಿದೆ. ಚಿರತೆ ಸೆರೆಗೆ ಇಟ್ಟಿರುವ ಬೋನ್ ನಲ್ಲಿ ಹೆಣ್ಣು ಚಿರತೆ ಮೂತ್ರ ಸಿಂಪಡಣೆ ಮಾಡಲಾಗಿದೆ. ಇದನ್ನೂ ಓದಿ : – ಮಳೆಯ ಆರ್ಭಟಕ್ಕೆ ನಲುಗಿದ ರಾಮನಗರ – ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ಮಾಜಿ ಸಿಎಂ ಹೆಚ್.ಡಿ.ಕೆ ಮನವಿ
ಈ ಮೂಲಕ ಚಿರತೆಯನ್ನ ಲೈಂಗಿಕವಾಗಿ ಆಕರ್ಷಣೆ ಮಾಡಿ ಖೆಡ್ಡಾಗಿ ಬೀಳಿಸುವ ಪ್ಲ್ಯಾನ್ ಮಾಡಲಾಗಿದೆ. ಆದರು ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ. ಸೆರೆಯಾಗದ ಚಿರತೆಯಿಂದಾಗಿ ಬೆಳಗಾವಿ ( belagavi ) ನಗರ ಜನರಲ್ಲಿ ಆತಂಕ ದೂರವಾಗುತ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. 22 ಶಾಲೆಗಳ ರಜೆಯನ್ನು ಮುಂದುವರಿಕೆ ಮಾಡಲಾಗಿದೆ.
ಇದನ್ನೂ ಓದಿ : – ರಾಜ್ಯದಲ್ಲಿ ಇಂದು ಕೂಡ ಗುಡುಗು ಸಹಿತ ಭಾರಿ ಮಳೆಯಾಗಲಿದೆ – ಹವಾಮಾನ ಇಲಾಖೆ ಮುನ್ಸೂಚನೆ