ಮೈಸೂರಿ (Mysuru) ನ ಮೇಟಗಳ್ಳಿಯಲ್ಲಿರುವ ಆರ್ ಬಿ ಐ (Rbi) ಆವರಣದಲ್ಲಿ ಚಿರತೆ (Leopard) ಯೊಂದು ಸಂಸಾರದ ಜೊತೆ ಪತ್ರಕ್ಷವಾಗಿದೆ. ಚಿರತೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಮುನ್ನೆಚ್ಚರಿಕೆಯಾಗಿ ಸೆಪ್ಟೆಂಬರ್ 1 ರಿಂದಲೇ ಆರ್ ಬಿ ಐ ಸನಿಹದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಒಂದು ವಾರದ ಹಿಂದೆ ಚಿರತೆ ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಚಿರತೆಗಳು ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬೋನ್ ಗಳನ್ನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಮೈಸೂರಿನ ಆರ್ ಬಿ ಐ ಆವರಣದಲ್ಲಿ ಚಿರತೆಗಳು ಇರುವುದು ಖಚಿತವಾದ ಕಾರಣ ಕಾರ್ಯಾಚರಣೆ ಆರಂಭಿಸಿದ್ದೇವೆ. ಒಂದು ವಾರದ ಹಿಂದೆ ಸಿ ಸಿ ಕ್ಯಾಮೆರಾದಲ್ಲಿ ಚಿರತೆಗಳು ಸೆರೆಯಾಗಿವೆ ಎಂದು ಡಿಸಿಎಫ್ ಕಮಲ ಕಾಳನ್ ಹೇಳಿದ್ದಾರೆ. ಅಲ್ಲದೇ ಚಿರತೆಗಳ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಕಳೆದ ಮೂರು ದಿನಗಳಿಂದ ಸತತ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಆ ಬಳಿಕ ಚಿರತೆಯ ಸುಳಿವು ಕಂಡು ಬಂದಿಲ್ಲ. ಆದರೂ ಮೂರು ಕಡೆ ಬೋನ್ ಇರಿಸಿ ಚಿರತೆ ಸೆರೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಎಲೆಜಬೆತ್ ರಾಣಿಯ ಕಿರೀಟದಲ್ಲಿದ್ದ ಭಾರತದ ಕೊಹಿನೂರು ವಜ್ರ ಯಾರಿಗೆ ಸೇರುತ್ತೆ…?
ಚಿರತೆಗಳು ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುತ್ತವೆ. ಹಗಲು ಹೊತ್ತಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಹಾಗಾಗಿ ಜನರು ಭಯ ಪಡುವ ಅಗತ್ಯವಿಲ್ಲ. ರಾತ್ರಿ ವೇಳೆ ಓಡಾಡುವಾಗ ಎಚ್ಚರಿಕೆಯಿಂದ ಇದ್ದರೆ ಸಾಕು. ಮೈಸೂರಿನ ಹಲವೆಡೆ ಚಿರತೆಗಳು ಇರುವುದು ಸಾಮಾನ್ಯವಾಗಿದೆ. ಚಿರತೆಗಳು ಒಂದೇ ಕಡೆ ನೆಲೆ ನಿಲ್ಲುವುದಿಲ್ಲ. ಆಹಾರ ಹುಡುಕಿಕೊಂಡು ಅಲೆದಾಡುತ್ತಿರುತ್ತವೆ. ನಾಗರಹೊಳೆ, ಬಂಡೀಪುರ ಅಭಯಾರಣ್ಯಗಳು ಮೈಸೂರಿಗೆ ಸನಿಹದಲ್ಲಿವೆ. ಚಾಮುಂಡಿಬೆಟ್ಟವೂ ಇರುವುದರಿಂದ ಆಗಾಗ್ಗೆ ಮೈಸೂರಿನ ಜನವಸತಿ ಪ್ರದೇಶಗಳತ್ತ ಚಿರತೆಗಳು ಬರುವುದು ಸಾಮಾನ್ಯವಾಗಿದೆ. ಹಾಗಾಗಿ ಜನರು ಭಯಪಡುವ ಅಗತ್ಯವಿಲ್ಲ ಎಂದು ಡಿಸಿಎಫ್ ಕಮಲ ಕಾಳನ್ ತಿಳಿಸಿದ್ದಾರೆ.
ಇದನ್ನೂ ಓದಿ : – ಅಪ್ಪು ಅದೊಂದು ಕನಸು ನನಸು ಮಾಡಬೇಕಿತ್ತು – ‘ನಾ ನಿನ್ನ ಮರೆಯಲಾರೆ’ ಸಿನಿಮಾ ನೆನಪಿಸಿಕೊಂಡ ರಮ್ಯಾ