ಬನ್ನೇರುಘಟ್ಟ (Bannerghatta) ಬಳಿಯ ಭೂತನಹಳ್ಳಿ (Bhutanahalli) ಯಲ್ಲಿ ಚಿರತೆ (Leopard) ಕಾಣಿಸಿಕೊಂಡಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೂತನಹಳ್ಳಿ ಹೊಂದಿಕೊಂಡಿದೆ. ರಾತ್ರಿ ಬೈಕ್ ಗಳ ಮಧ್ಯೆ ಚಿರತೆ ಅಡಗಿ ಕುಳಿತು ಬೇಟೆಗೆ ಹೊಂಚು ಹಾಕುತ್ತಿತ್ತು.
ಚಿರತೆಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ 2 ದಿನಗಳಿಂದ ಭೂತನಹಳ್ಳಿ ಸುತ್ತ ಮುತ್ತ ಚಿರತೆ ಓಡಾಡಿದೆ. ಭೂತನಹಳ್ಳಿ ಗ್ರಾಮದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ . ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಸಿದೆ.
ಇದನ್ನೂ ಓದಿ : – ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ – ಅನುಸೂಯ ದೇವಿ ದರ್ಶನಕ್ಕೆ ತೆರಳಿದ ಸಾವಿರಾರು ಮಹಿಳೆಯರು