ತುಮಕೂರು ( tumukuru ) ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದಲ್ಲಿ ಚಿರತೆ ( tiger ) ಯೊಂದು ಕಾಣಿಸಿಕೊಂಡಿದ್ದು, ಜನತೆ ಭಯಗೊಂಡಿದ್ದಾರೆ. ಪಟ್ಟಣದ ತುಮಕೂರು ರಸ್ತೆ ಹೊರವಲಯದ ಎಸ್.ಎಸ್.ಕೆ ಕಾಲೇಜು ಮತ್ತು ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ವಸತಿ ನಿಲಯದ ಮಧ್ಯೆ ಪ್ರದೇಶದಲ್ಲಿ ಚಿರತೆ ಕಂಡು ಬಂದಿದೆ. ಚಿರತೆಯು ನೀರು ಕುಡಿಯಲು ಬಂದ ಸಂದರ್ಭದಲ್ಲಿ ಮಣ್ಣು ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕರೊಬ್ಬರು ಗಮನಿಸಿದ್ದು, ಮೊಬೈಲ್ ( mobile ) ನಲ್ಲಿ ಚಿರತೆ ನೀರು ಕುಡಿದು ತೆರಳುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಸದ್ಯ ಈ ವೀಡಿಯೋ ಫುಲ್ ವೈರಲ್ ಅಗಿದ್ದು, ಜನತೆ ಭೀತಿಗೊಂಡಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಸ್ಥಳವು ಪಟ್ಟಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಈ ಹಿಂದೆ ಒಮ್ಮೆ ಪಟ್ಟಣಕ್ಕೆ ಕರಡಿಯೊಂದು ಬಂದು ರಸ್ತೆಯಲ್ಲೆಲ್ಲಾ ಸುತ್ತಾಡಿ ಹೋಗಿತ್ತು. ಕಾಡು ಪ್ರಾಣಿಗಳು ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಪರಿಶೀಲನೆ ನಡೆಸಿ, ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : – ಕಾಂಗ್ರೆಸ್ ನಲ್ಲಿ ಬಂಡಾಯ – ಹಲವು ಸಮಿತಿಗಳ ಹಿರಿಯ ನಾಯಕ ಗುಲಾಂ ನಬಿ ಆಜಾದ್ ರಾಜೀನಾಮೆ