ಕವಿ ಸರ್ವಜ್ಞ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದವರು. ಸಮಾಜದಲ್ಲಿ ಬೇಧ ಭಾವ ತೊಡೆದು ಹಾಕಲು ಶ್ರಮಿಸಿದರು. ಹಳ್ಳಿ ಹಳ್ಳಿ ಓಡಾಡಿ ಜನ ಜಾಗೃತಿ ಮಾಡಿದರು . ಎಲ್ಲರೂ ಒಂದೇ ಎಂದು ಸಾರಿದರು. ಅವರ ಮೂರ್ತಿಗೆ ಇಂದು ಮಾಲಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಹಾವೇರಿ ( haveri ) ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಮಾಸೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್( arun singh ) ಹೇಳಿದ್ದಾರೆ.
2023 ರ ಚುನಾವಣೆ ತಯಾರಿ ಬಹಳ ಚೆನ್ನಾಗಿ ನಡೆದಿದೆ. ನಮ್ಮ ನಾಯಕರಾದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತಯಾರಿ ನಡೆದಿದೆ. ನರೇಂದ್ರ ಮೋದಿ ( narendra modi ) ಯವರಿಗೆ ದೇಶದ ಎಲ್ಲಾ ಕಡೆ ಗೌರವ ಸಿಗುತ್ತಿದೆ. ಕರ್ನಾಟಕದ ಜನತೆ ಕೂಡಾ ನರೇಂದ್ರ ಮೋದಿಯವರ ಜೊತೆ ನಿಂತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ. ವಿಷನ್ ಲೆಸ್ ರಾಹುಲ್ ಗಾಂಧಿ, ಅವರನ್ನು ನೇತಾ ಅಂತ ಯಾರೂ ಒಪ್ಪಿಕೊಳ್ಳಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಈಗಾಗಲೇ ಇತಿಹಾಸ ನಿರ್ಮಿಸಿದ್ದೇವೆ. ಕಾಂಗ್ರೆಸ್ ಸೋಲೋದ್ರಲ್ಲಿ ಇತಿಹಾಸ ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ :- Joe Biden -ಪಾಕಿಸ್ತಾನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದು- ಅಮೆರಿಕ ಅಧ್ಯಕ್ಷ ಜೋ ಬೈಡನ್
ಉತ್ತರಖಂಡ, ಗೋವಾ, ಮಣಿಪುರ, ಯುಪಿ ಎಲ್ಲಾ ಕಡೆ ಸೋತು ಕಾಂಗ್ರೆಸ್ ನವರು ಇತಿಹಾಸ ಮಾಡ್ತಿದ್ದಾರೆ. ನಾವು ಗೆದ್ದು ಇತಿಹಾಸ ನಿರ್ಮಿಸುತ್ತಿದ್ದೇವೆ. ಕರ್ನಾಟಕ ( karnataka ) ದಲ್ಲಿಯೂ 150 ಕ್ಕೂ ಹೆಚ್ಚು ಸೀಟು ಗೆದ್ದು ಇತಿಹಾಸ ಸೃಷ್ಟಿಸುತ್ತೇವೆ. ರಾಹುಲ್ ಗಾಂಧಿ ಇಂದು ಬಳ್ಳಾರಿಯಲ್ಲಿ ಭಾಷಣ ಮಾಡಲಿದ್ದಾರೆ. ಅವರು ನಿಜವಾಗಿಯೂ ಕರ್ನಾಟಕದ ಬಗ್ಗೆ ಗೊತ್ತಿದ್ದರೆ ಪೇಪರ್ ನೋಡದೇ ಭಾಷಣ ಮಾಡಲಿ. 13 ದಿನಗಳಿಂದ ಕರ್ನಾಟಕದಲ್ಲಿ ಓಡಾಡ್ತಿದ್ದಾರೆ. ಕರ್ನಾಟಕದ ಬಗ್ಗೆ ಅವರ ವಿಷನ್ ಏನು? ಐ ಕ್ಯೂ ಏನು? ಕರ್ನಾಟಕದಲ್ಲಿ ಇದ್ದು ಕರ್ನಾಟಕದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ? ಮಾತಾಡಲಿ. ಇಲ್ಲದಿದ್ದರೆ ಇವರ ಭಾರತ್ ಜೋಡೋ ಯಾತ್ರೆ ಮಾರ್ನಿಂಗ್ ವಾಕ್ ಮಾಡಿದ ಹಾಗೆ ಆಗುತ್ತದೆ ಎಂದು ಹೇಳಿದ್ರು.
ಇದನ್ನೂ ಓದಿ :- ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ – ಸಚಿವ ಆರ್.ಅಶೋಕ್ ವ್ಯಂಗ್ಯ