ಸಂವಿಧಾನವಾಗಿ ನಮ್ಮ ನೀರನ್ನ ಬಳಸಿಕೊಳ್ಳುವ ಸಲುವಾಗಿ ಮೇಕೆದಾಟು ಯೋಜನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕುಡಿಯುವ ನೀರಿಗಾಗಿ, ರೈತರ ಸಲುವಾಗಿ ಇರೋ ಯೋಜನೆಯಾಗಿದೆ. ಸುಪ್ರೀಂಕೋರ್ಟ್ ನಲ್ಲಿ 2018ರಲ್ಲಿ ಅಂತಿಮ ತೀರ್ಪು ಬಂದಿದೆ. ಇದಕ್ಕೆ ತಮಿಳುನಾಡು ಹಾಗೂ ನಾವು ಹೆಚ್ಚುಕಡಿಮೆ ಒಪ್ಪಿಕೊಂಡಿದ್ದೇವೆ. ೧೭೭.೨೫ ಟಿಎಂಸಿ ನೀರನ್ನ ಬಿಳಿಗುಂಡ್ಲು ಬಳಿ ಅಳತೆ ಮಾಡಿ ಕೊಡಬೇಕು. ಅದನ್ನ ಇಂಪ್ಲಿಮೇಟ್ ಮಾಡಲು ಕಾವೇರಿ ಮ್ಯಾನೇಜ್ ಮೆಂಟ್ ಅಥಾರಿಟಿ ಸಹ ರಚನೆಯಾಗಿದೆ. ಕಳೆದ ಏಳೆಂಟು ವರ್ಷಗಳಿಂದ ತಮಿಳುನಾಡಿಗೆ ೧೭೭.೨೫ ಟಿಎಂಸಿ ನೀರು ಹೊರತುಪಡಿಸಿ ೫೮೨ ಟಿಎಂಸಿ ನೀರು ತಮಿಳುನಾಡಿಗೆ ಹೆಚ್ಚಿನದ್ದಾಗಿ ಹರಿದಿದೆ. ಅದು ನಮ್ಮ ನೀರು, ಈ ನೀರಿಗೂ ತಮಿಳುನಾಡಿಗೂ ಸಂಬಂಧ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಶೇ 30ರಷ್ಟು ಬೆಂಗಳೂರಿನವರಿಗೆ ಇನ್ನೂ ಕಾವೇರಿ ನೀರು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನಸಂಖ್ಯೆ ಇದೆ. ಅಂತರರಾಷ್ಟ್ರೀಯ ಖ್ಯಾತಿಗೆ ಒಳಗಾಗಿರೋ ಬೆಂಗಳೂರಿಗೆ ನೀರು ಕೊಡಬೇಕಲ್ವಾ ಎಂದು ಪ್ರಶ್ನಿಸಿದ್ರು. ಹಿಂದಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗ್ತಾ ಬಂದಿದೆ. ನಮ್ಮ ನೀರನ್ನ ನಾವು ಬಳಸಿಕೊಳ್ಳೋಕ್ಕೆ ತಮಿಳುನಾಡು ತಕರಾರು ತೆಗೆಯುತ್ತಿದೆ. ಅವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ ನಾವು ಒಂದಾಗಿರೋಣ ಎಂದು ಸಿದ್ದರಾಮಯ್ಯ ಹೇಳಿದ್ರು.
0 100 Less than a minute