ಚಿಕ್ಕಮಗಳೂರು ( chikkamagaluru ) ನಗರಸಭೆ ಅಧ್ಯಕ್ಷ ವೇಣುಗೋಪಾಲ್ (venugopal )ಗನ್ ಮ್ಯಾನ್ ಕೋರಿ ಎಸ್ಪಿ ಅಕ್ಷಯ್ ಅವರಿಗೆ ಪತ್ರ ಬರೆದಿದ್ದಾರೆ.
ನಾನು ಅಧ್ಯಕ್ಷನಾದಾಗಿನಿಂದ ಕಿಡಿಗೇಡಿಗಳು ನನಗೆ ತೊಂದರೆ ಕೊಡುತ್ತಿದ್ದಾರೆ ನಾನು ಕುಟುಂಬದ ಜೊತೆ ಧರ್ಮಸ್ಥಳಕ್ಕೆ ಹೋದಾಗಲೂ ಫಾಲೋ ಮಾಡಿದ್ದಾರೆ. ನನ್ನನ್ನ ಹಿಂಬಾಲಿಸಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ . ನಾನು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆಯಾಗಿದ್ದೇನೆ . ನನ್ನ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ :- ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ?