ಪೊಲೀಸ್ ಚೆಕ್ ಪೋಸ್ಟ್(ಹಳೆಯ ಕಟ್ಟಡ) ಲಾರಿ ಡಿಕ್ಕಿ ಹೊಡೆದ ಲಾರಿ ಚಾಲಕ ಸ್ಥಳದಲ್ಲೇ ಸ್ವಾನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಶಕ್ತಿನಗರ(ದೇವಸೂಗೂರು)೨ನೇ ಕ್ರಾಸ್ ಬಳಿ ಈ ದಾರುಣ ಘಟನೆ ನಡೆದಿದೆ. ೩೦ ವರ್ಷದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗುರುತು ಪತ್ತೆಯಾಗಿಲ್ಲ. ಹೊಸಪೇಟೆ ಕಡೆಯಿಂದ ಲಾರಿ ಹೈದರಾಬಾದ್‌ಗೆ ತೆರಳುತ್ತಿತ್ತು. ಆದ್ರೆ ಮಾರ್ಗ ಮಧ್ಯಯೇ ಶಕ್ತಿನಗರದ ೨ನೇ ಕ್ರಾಸ್ ಬಳಿಯಿರುವ ಪಾಳು ಬಿದ್ದಿರುವ ಹಳೆಯ ಪೊಲೀಸ್ ಠಾಣೆ ಚೆಕ್ ಪೋಸ್ಟ್ ಗೆ ಲಾರಿ ಚಾಲಕ ಡಿಕ್ಕಿ ಹೊಡೆದಿದ್ದಾನೆ.
ಲಾರಿ ಮುಂಭಾಗ ನುಜ್ಜು ನುಜ್ಜು ಆಗಿದೆ. ಘಟನೆಯಿಂದಾಗಿ ಕೆಲ ಸಮಯ ಸಂಚಾರ ಅಡಚಣೆಯಾಯಿತು. ಬಳಿಕ ಪೊಲೀಸರು ವಾಹನವನ್ನ ಹಾಗೂ ಮೃತದೇಹವನ್ನ ಜೆಸಿಬಿ ಸಹಾಯದಿಂದ ಹೊರತೆಗೆಯುವ ಮೂಲಕ ಸಂಚಾರ ಯಥಾಸ್ಥಿತಿ ಮರಳಿತ್ತು. ಘಟನೆಯಲ್ಲಿ ಮೃತಪಟ್ಟ ಲಾರಿ ಚಾಲಕನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.