ಚಿತ್ರುದುರ್ಗ (Chitradurga) ದಲ್ಲಿ ಬುಧವಾರ ಕಾನೂನು ವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (ALOK KUMAR) ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ತೂಕ ಇಳಿಸಿಕೊಂಡು ಆರೋಗ್ಯ (Health) ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಾಕೀತು ಮಾಡಿದರು.
ಹಿರಿಯೂರು ಡಿವೈಎಸ್ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈಎಸ್ಪಿ ಅನಿಲ್, ಚಳ್ಳಕೆರೆ ಡಿವೈಎಸ್ಪಿ ರಮೇಶ್, ಡಿಸಿಆರ್ಬಿ ಡಿವೈಎಸ್ಪಿ ಲೋಕೇಶ್, ಎಸ್ಪಿ ಕಚೇರಿ ಸಿಪಿಐ ನಾಗರಾಜ್ ಅವರಗೆ FITNESS ಪಾಠ ಮಾಡಿದರು. ಹಿರಿಯೂರು ಸಿಪಿಐ ಆನಂದ್ ಅವರಿಗೆ ಸ್ಲಿಮ್ ಆಗಿದ್ದೀರಿ ಎಂದರು. ಐಜಿಪಿ ತ್ಯಾಗರಾಜನ್, ಎಸ್ಪಿ ಕೆ.ಪರಶುರಾಮ್ ಲೈಟ್ ವೇಯ್ಟ್ ಇದ್ದಾರೆ. ಉಳಿದವರು ಹೆವಿ ವೇಯ್ಟ್ ಆಗಿದ್ದೀರಿ. ತೂಕ ಇಳಿಸಿಕೊಳ್ಳಿ. ಇದು ಟಫ್ ಜಾಬ್. ಫುಡ್ ಕಂಟ್ರೋಲ್ ಮಾಡಿ, ವ್ಯಾಯಾಮ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ : – ಗೋವಾ ಪ್ರವಾಸದ ವೇಳೆ ಬೆಳಗಾವಿಯ ಖುಷಿ ಕ್ಷಣಗಳನ್ನು ಹಂಚಿಕೊಂಡ ಸಚಿನ್ ತೆಂಡೂಲ್ಕರ್