ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ 41 ಬಾರಿ ರಣಜಿ ಟ್ರೋಫಿ ( Ranji Trophy ) ಗೆದ್ದು ದಾಖಲೆ ಬರೆದಿರುವ ಮುಂಬೈ ವಿರುದ್ಧ ಮಧ್ಯಪ್ರದೇಶ 6 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಸಂಭ್ರಮಿಸಿದೆ.
4ನೇ ದಿನದಾಟದಲ್ಲಿ ಮುಂಬೈ ತಂಡ ನೀಡಿದ 108 ರನ್‍ಗಳ ಗೆಲುವಿನ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ 29.5 ಓವರ್ ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 108 ರನ್ ಸಿಡಿಸಿ 6 ವಿಕೆಟ್‍ಗಳ ಗೆಲುವು ದಾಖಲಿಸಿತು. ಈ ಮೂಲಕ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ.
ಮಧ್ಯಪ್ರದೇಶ ಪರ ಹಿಮಾಂಶು ಮಂತ್ರಿ 37 ರನ್ (55 ಎಸೆತ, 3 ಬೌಂಡರಿ), ಶುಭಂ ಶರ್ಮಾ 30 ರನ್ (75 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ರಜತ್ ಪಾಟಿದಾರ್ ಅಜೇಯ 30 ರನ್ (37 ಎಸೆತ, 4 ಬೌಂಡರಿ) ಬಾರಿಸಿ ಮಧ್ಯಪ್ರದೇಶಕ್ಕೆ ಗೆಲುವಿನ ಉಡುಗೊರೆ ನೀಡಿದರು.
ಇದನ್ನೂ ಓದಿ : – ಅಂದು ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ – ಇಂದು ಪಾಕ್ ನಲ್ಲಿ ಚಪ್ಪಲಿ ವ್ಯಾಪಾರಿ