ಬಂಡಾಯ ಶಾಸಕರು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ (MAHARASTRA CM ) ಉದ್ಧವ್ ಠಾಕ್ರೆ ಹೇಳಿದ್ದಾರೆ. ಸದ್ಯ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಫೇಸ್ಬುಕ್ ಲೈವ್ ಮೂಲಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ (UDDAV) ರಾಜೀನಾಮೆ ಪತ್ರವೂ ರೆಡಿಯಿದೆ ಎಂದು ತಿಳಿಸಿದ್ದಾರೆ.
ಶಾಸಕರು ಬಂಡೇಳುವ ಅವಶ್ಯಕತೆಯಿರಲಿಲ್ಲ . ಮುಖಾಮುಖಿ ಆಗಮಿಸಿ ನನ್ನ ರಾಜೀನಾಮೆ ಕೇಳಲಿ ಎಂದು ಉದ್ಧವ್ ಠಾಕ್ರೆ (UDDAV THACKRAY) ಹೇಳಿದ್ರು. ಸಿಎಂ ಆಗಲು ನಾನು ಬಯಸಿಯೇ ಇರಲಿಲ್ಲ. ಕದ್ದು ಮುಚ್ಚಿ ಅಧಿಕಾರ ನಡೆಸುವ ಅಗತ್ಯವೂ ಇಲ್ಲ.
ನಾನು ಇವತ್ತು ಕೋವಿಡ್ಗೆ ತುತ್ತಾಗಿದ್ದೇನೆ. ಹೀಗಾಗಿ ನಾನು ಸ್ವಲ್ಪ ಡಲ್ ಆಗಿ ಕಾಣುತ್ತಿದ್ದೇನೆ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಳಾಸಾಹೇಬ್ ಠಾಕ್ರೆ (BALASAHEB THACKRAY) ಹಿಂದುತ್ವದಲ್ಲಿ ನಾನು ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಾನು ಅವರದೇ ಹಿಂದುತ್ವದ ಸಿದ್ಧಾಂತದಲ್ಲಿ ಇದ್ದೇನೆ. ಅದೇ ನಮ್ಮ ಅಸ್ತಿತ್ವ. ಶಿವಸೇನೆ (Shivasena) ಯಾವತ್ತೂ ಹಿಂದುತ್ವವನ್ನು ಬಿಟ್ಟಿಲ್ಲ. ಹಿಂದುತ್ವ ನಮ್ಮ ಸಿದ್ಧಾಂತ ಹಾಗೂ ಗುರುತು. ನಾನು ಹಿಂದುತ್ವಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಆ ಮೂಲಕ ತಾನು ಈಗಲೂ ಹಿಂದುತ್ವದ ಪರವಾಗಿದ್ದೇನೆ ಎನ್ನುವ ಸಂದೇಶ ನೀಡಿದ್ದಾರೆ. ನನ್ನ ಜನರೇ ನನ್ನ ವಿರುದ್ಧ ನಿಂತರು. ಇದು ನನಗೆ ಬೇಸರ ತರಿಸಿದೆ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಡ ಎಂದು ಯಾರೇ ಒಬ್ಬ ಶಾಸಕ ಹೇಳಿದರೂ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ.ಇದನ್ನೂ ಓದಿ : – ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳದ ಶಾಕ್ – ಮುಂದಿನ ವರ್ಷದಿಂದ ಏಕರೂಪದ CET ನಡೆಸಲು ಚಿಂತನೆ
ಏಕನಾಥ ಶಿಂಧೆ (EKNATH SINDHE) ಅವರ ಜತೆ ಹೋಗಿರುವ ಶಾಸಕರನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಿದ್ದಾರೆ.ಈ ನಡುವೆ ಬಂಡಾಯ ಸಾರಿರುವ ಏಕನಾಥ ಶಿಂಧೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ನನಗೆ 34 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ. 34 ಶಾಸಕರ ಸಹಿ ಇರುವ ಪತ್ರವನ್ನು ಅವರು ರಾಜ್ಯಪಾಲರಿಗೆ ಗುವಾಹಟಿಯಿಂದಲೇ ರವಾನೆ ಮಾಡಿದ್ದಾರೆ. ಇದನ್ನೂ ಓದಿ : – ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಾಸಕರು ಮಾರಾಟಕ್ಕಿಲ್ಲ – ಕಮಲ್ ನಾಥ್