ಮಾರ್ಕ್ ಜುಕರ್ ಬರ್ಗ್ (Zuckerberg ) ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಮ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಫೇಸ್ಬುಕ್ (FACEBOOK)ಹಾಗೂ ಇನ್ ಸ್ಟಾ ಗ್ರಾಮ್ (INSTA GRAM) ಗಳಲ್ಲಿ 2024ರ ವರೆಗೆ ಆದಾಯ ಹಂಚಿಕೆಯ ಯೋಜನೆಯನ್ನು ತಡೆ ಹಿಡಿಯುತ್ತದೆ ಎಂದು ಫೇಸ್ ಬುಕ್ ಸಿಇಒ ತಮ್ಮ ಅಧಿಕೃತ ಖಾತೆಯ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ನಾವು 2024ರ ವರೆಗೆ ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಮ್ ನಲ್ಲಿ ಆದಾಯ ಹಂಚಿಕೆಯನ್ನು ತಡೆಹಿಡಿಯುತ್ತೇವೆ. ಅವುಗಳಲ್ಲಿ ಪಾವತಿಸಲಾಗುವ ಆನ್ ಲೈನ್ ಈವೆಂಟ್ ಗಳು, ಸಬ್ ಸ್ಕ್ರಿಪ್ಷನ್ ಗಳು, ಬ್ಯಾಡ್ಜ್ ಗಳು ಹಾಗೂ ಬುಲೆಟಿನ್ ಗಳು ಸೇರಿರುತ್ತವೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಜುಕರ್ ಬರ್ಗ್ ಈ ಎರಡು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಹಣ ಸಂಪಾದಿಸುವ ಹೊಸ ಮಾರ್ಗಗಳ ಬಗ್ಗೆಯೂ ತಿಳಿಸಿದ್ದಾರೆ. ಇದಕ್ಕಾಗಿ ಪ್ಲಾಟ್ ಫಾರ್ಮ್ ಗಳಲ್ಲಿ ಕೆಲವು ಹೊಸ ಫೀಚರ್ ಗಳನ್ನು ತರಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – VIRAT KOHLI – ವಿರಾಟ್ ಕೊಹ್ಲಿಗೆ ಕೋವಿಡ್ ಪಾಸಿಟಿವ್
ಕಂಪನಿ ಫೇಸ್ಬುಕ್ ನಲ್ಲಿ ಹೆಚ್ಚಿನ ರಚನೆಕಾರರಿಗೆ ರೀಲ್ಸ್ ಪ್ಲೇ ಬೋನಸ್ ಪ್ರೋ ಗ್ರಾಂ ಅನ್ನು ತೆರೆಯುತ್ತಿದೆ. ಇದು ರಚನೆಕಾರರು ತಮ್ಮ ಇನ್ ಸ್ಟಾ ಗ್ರಾಮ್ ರೀಲ್ಸ್ ಗಳನ್ನು ಫೇಸ್ ಬುಕ್ ಗೆ ಕ್ರಾಸ್-ಪೋಸ್ಟ್ ಮಾಡಲು ಹಾಗೂ ಅಲ್ಲಿಯೂ ಹಣಗಳಿಸಲು ಅನುವು ಮಾಡಿಕೊಡುತ್ತದೆ. ಕಂಪನಿಯು ಇನ್ ಸ್ಟಾ ಗ್ರಾಮ್ನಲ್ಲಿ ಒಂದು ಹೊಸ ಯೋಜನೆಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಅಲ್ಲಿ ರಚನೆಕಾರರು ತಮಗೆ ಬೇಕಾದ ವಿಷಯಗಳನ್ನು ಹುಡುಕಬಹುದು ಎಂದು ಹೇಳಿದ್ರು.
ಇದನ್ನೂ ಓದಿ : – ಭಾರತ- ದಕ್ಷಿಣ ಆಫ್ರಿಕಾ ಪಂದ್ಯ ರದ್ದು ಹಿನ್ನೆಲೆ ಟಿಕೆಟ್ ಪಡೆದಿದ್ದವರಿಗೆ ಶೇ.50 ರಷ್ಟು ಹಣ ವಾಪಸ್