ಪಿಯುಸಿ ಓದಿದ್ದರೂ ಐಎಎಸ್, ಕೆಎಎಸ್ ಮಾಡುತ್ತೀದ್ದೀನಿ ಅಂತ ಸಾಮಾಜಿಕ ಜಾಲತಾಣದಲ್ಲಿ ಫೋಸ್ ಕೊಟ್ಟಕೊಂಡು ಯುವತಿಯರಿಗೆ ವಂಚಿಸುತ್ತಿದ್ದವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬೀರೂರು ಮೂಲದ ಹರ್ಷ ಆಲಿಯಾಸ್ ದಿವಾಕರ್ ಈಗ ಕಂಬಿ ಎಣಿಸುತ್ತಿದ್ದಾರೆ.
ಪಿಯುಸಿ ಓದಿದ್ದರೂ ಐಎಎಸ್, ಕೆಎಎಸ್ ಓದುತ್ತಿದ್ದೇನೆ ಎಂದು ಫೇಸ್ ಬುಕ್, ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡು ಯುವತಿಯರಿಗೆ ಗಾಳ ಹಾಕುತ್ತಿದ್ದ ಹರ್ಷ, ಡಿಸಿ ಹಾಗೂ ಕೆಎಎಸ್ ಅಧಿಕಾರಿಗಳ ವಾಹನ ಮುಂದೆ ನಿಂತು ಪೋಟೋ ತೆಗೆದುಕೊಳ್ಳುತ್ತಿದ್ದ.
ಸುಮಾರು 10 ಯುವತಿಯರಿಗೆ ಈ ರೀತಿ ಫೋಟೊಗಳನ್ನು ಕಳಿಸಿ ಯಾಮಾರಿಸುತ್ತಿದ್ದ. ಕೆಂಗೇರಿ ಮೂಲದ ಕಾವ್ಯ ಎಂಬ ಯುವತಿ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಈತನ ಅಸಲಿಯತ್ತು ಬೆಳಕಿಗೆ ಬಂದಿದೆ.
ದಿವಾಕರ್ ನನ್ನು ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.