ನನ್ನನ್ನು ಪ್ರೀತಿಸು ಎಂದು ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ ಬಲವಂತವಾಗಿ ತಾಳಿ ಕಟ್ಟಲು ಹೋಗಿದ್ದು ಯುವತಿ ನಿರಾಕರಿಸಿದ್ದರಿಂದ ಚಾಕುವಿನಿಂದ ಇರಿದು ಕೊಂದು ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ಶಿರಾ ತಾಲ್ಲೂಕಿನ ದೊಡ್ಡಗುಳ್ಳ ಗ್ರಾಮ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಪಿಯುಸಿ ಓದುತ್ತಿದ್ದ ಯುವತಿ ಮೃತಪಟ್ಟಿದ್ದು, ಕೊಲೆ ಮಾಡಿದ ಈರಣ್ಣ ನಾಪತ್ತೆಯಾಗಿದ್ದಾನೆ.
ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಈರಣ್ಣ, ಬಲವಂತವಾಗಿ ತಾಳಿ ಕಟ್ಟಲು ಪ್ರಯತ್ನಿಸಿದಾಗ ಯುವತಿ ವಿರೋಧಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಈರಣ್ಣ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಿದ್ದಾನೆ.
ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಈರಣ್ಣನ ಶೋಧ ಕಾರ್ಯ ನಡೆದಿದೆ.