ಮನೆಯಲ್ಲಿ ಪತಿ ಇಲ್ಲದಿರುವಾಗ ಬಂದು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ ಪ್ರಿಯಕರನನ್ನು ಪತಿ ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘನೆ ನಡೆದಿದೆ.
ತನ್ನ ಮನೆಯಲ್ಲಿ ಪತ್ನಿ ಸೌಭಾಗ್ಯ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿ (37)ಯನ್ನು ಕಂಡ ಪತಿ ಶಿವಣ್ಣ ಕೊಲೆ ಮಾಡಿದ್ದಾನೆ.
ಸೌಭಾಗ್ಯ ಮತ್ತು ಬಸವಶೆಟ್ಟಿ ನಡುವೆ ಹಲವು ದಿನಗಳಿಂದ ಅಕ್ರಮ ಸಂಬಂಧ ಇತ್ತು. ಈ ವಿಷಯ ಪತಿ ಶಿವಣ್ಣಗೆ ತಿಳಿಯಿತು. ಪ್ರಿಯಕರ ಮತ್ತು ಪತ್ನಿ ಚುಂಬಿಸಿದ ಫೋಟೋವನ್ನೂ ಶಿವಣ್ಣ ನೋಡಿದ. ಭಾನುವಾರ ರಾತ್ರಿ ಮನೆಗೆ ಹೋದಾಗ ಅಲ್ಲಿ ಪತ್ನಿ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿಯನ್ನು ಕೊಂದಿದ್ದಾನೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.