ಜಕಾರ್ತಾ: ವರನೊಬ್ಬ ತನ್ನ ವಧುವಿನ ಮನೆಗೆ ಹೋಗುವ ಬದಲು ಅದೇ ದಿನ ನಿಶ್ಚಿತಾರ್ಥವಾಗಬೇದ್ದ ಬೇರೊಬ್ಬರ ವಧುವಿನ ಮನೆಗೆ ಹೋದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಆದರೆ ಇದಕ್ಕೆ ಕಾರಣ ಮಾತ್ರ ಗೂಗಲ್ ಮ್ಯಾಪ್.
ಹೌದು ಇದು ವಿಚಿತ್ರವೆನಿಸಬಹುದಾದ ಘಟನೆ. ಹೆಚ್ಚಿನ ಸಂದರ್ಭಗಳಲ್ಲಿ ಅದೆಷ್ಟೋ ಜನರಿಗೆ ಹೀಗಾಗಿದ್ದುಂಟು. ಗೂಗಲ್ ಮ್ಯಾಪ್ನ್ನು ಅನುಸರಿಸಿಕೊಂಡು ಹೋಗಬೇಕಿದ್ದ ಸ್ಥಳಕ್ಕೆ ತೆರಳುವ ಬದಲು ಇನ್ನೆಲ್ಲೋ ಹೋದ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿವೆ.
ಒಂದೇ ಹಳ್ಳಿಯಲ್ಲಿ ಎರಡು ಸಮಾರಂಭಗಳು ನಡೆದಿದ್ದವು. ಇದೇ ಗೊಂದಲಕ್ಕೆ ಕಾರಣವಾಯಿತು. ವಧು ತನ್ನ ಮೇಕಪ್ ಹಾಕಿಕೊಳ್ಳುವುದರಲ್ಲಿ ನಿರತರಾಗಿದ್ದರಿಂದ ಪರಿಸ್ಥಿತಿಯ ಬಗ್ಗೆ ಮೊದಲಿಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಹೀಗೇ ಮಾತನಾಡುತ್ತಿರುವಾಗ ನಿಜಾಂಶ ತಿಳಿಯಿತು.
ನಂತರ ಪರಿಸ್ಥಿತಿ ತಿಳಿದು ಗಂಡಿನ ಕಡೆಯವರು ತಾವು ತಪ್ಪಾದ ಸ್ಥಳಕ್ಕೆ ಬಂದಿದ್ದೇವೆ ಎಂದು ತಿಳಿದು ಅದೇ ಊರಿನ ಇನ್ನೊಂದು ಮನೆಗೆ ಹೋದರು. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಬೇರೆ ವಧುವಿನ ಮನೆಯಿಂದ ಹೊರಬರುವ ವರನ ಕಡೆಯವರ ವಿಡಿಯೋ ಎಲ್ಲರಲ್ಲೂ ನಗು ತರಿಸುತ್ತಿದೆ.
ಜಾವಾದ ಪಾಕಿಸ್ ಜಿಲ್ಲೆಯ ಲೋಸಾರಿ ಹ್ಯಾಮ್ಲೆಟ್ ಅವರ ವಿವಾಹದ ಸ್ಥಳಕ್ಕೆ ಹೋಗಲು ವರನ ಕಡೆಯವರು ಗೂಗಲ್ ನಕ್ಷೆಗಳನ್ನು ನೋಡಿಕೊಂಡು ಹೋದರು. ಆದಾಗ್ಯೂ, ಅವರ ಉದ್ದೇಶಿತ ವಿಳಾಸದ ಬದಲು, ಅವರ ಕುಟುಂಬವು ಜೆಂಗ್ಕೋಲ್ ಹ್ಯಾಮ್ಲೆಟ್ನಲ್ಲಿ ಬಂದಿಳಿಯಿತು.