ಲಂಡನ್: ಇಲ್ಲೊಬ್ಬರು ತಿನ್ನಲು ಆ್ಯಪಲ್ನ್ನು ಆರ್ಡರ್ ಮಾಡಿದ್ದರು. ಆದರೆ ತಾವು ಮಾಡಿದ್ದ ಆರ್ಡರ್ನ ಪಾರ್ಸಲ್ ಬಂದಾಗ ಅಚ್ಚರಿಯಾಗಿದ್ದರು. ಪಾರ್ಸಲ್ನಲ್ಲಿ ತಿನ್ನುವ ಆ್ಯಪಲ್ ಜೊತೆಗೆ ಆ್ಯಪಲ್ ಐ ಫೋನ್ನ್ನು ಕಂಡು ಸಂತಸದಿಂದ ಕುಣಿದಾಡಿದ್ದರು.
ನಿಕ್ ಜೇಮ್ಸ್ ಎನ್ನುವವರಿಗೆ ಆ್ಯಪಲ್ ಜೊತೆಗೆ ಆ್ಯಪಲ್ ಐ ಫೋನ್ ಬಂದಿದೆ. ಇದನ್ನು ಕಂಡು ಒಂದು ಕ್ಷಣ ದಂಗಾದ ನಿಕ್ ತಅವು ಆರ್ಡರ್ ಮಾಡಿದ್ದು ಸೇಬು ಹಣ್ಣು ಅಲ್ಲವಾ ಎಂದು ಆರ್ಡರ್ ಹಿಸ್ಟರಿಯನ್ನು ಮತ್ತೊಮ್ಮೆ ಪರಿಶೀಲಿಸಿದ್ದಾರೆ. ಆದರೆ ಅದರಲ್ಲಿ ಆ್ಯಪಲ್ ಫ್ರುಟ್ ಎಂತಲೇ ಆರ್ಡರ್ ಮಾಡಲಾಗಿತ್ತು. ಬಳಿಕ ಈ ಬಗ್ಗೆ ಇ-ಕಾಮರ್ಸ್ ಸಂಸ್ಥೆ ಟೆಸ್ಕೋವನ್ನು ವಿಚಾರಿಸಿದ್ದಾರೆ.
ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಕಂಪನಿ ತನ್ನ ಗ್ರಾಹಕರಿಗೆ ಈ ರೀತಿಯ ವಿಶೇಷ ಉಡುಗೊರೆಗಳನ್ನು ನೀಡುತ್ತಿದೆ. ಹೀಗಾಗಿ ಐ ಫೋನ್ ನೀಡಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.