ಪುನೀತ್ ಮೇಲಿನ ಅಭಿಮಾನದಿಂದ ವೃದ್ಧೆಯೊಬ್ಬರು ತಾವೇ ಸ್ವತಃ ತಯಾರಿಸಿದ ಮಂಡಕ್ಕಿ ಹಾರವನ್ನು ತಂದಿದ್ದಾರೆ. ಈ ಕುರಿತು ಮಾತನಾಡಿದ ಅವರು ‘‘ಡಾ.ರಾಜ್ ಕುಮಾರ್ ಮೃತರಾದಾಗ ಮಂಡಕ್ಕಿ ಹಾರ ತಂದಿದ್ದೆ. ಅಂದಿನಿಂದ ಪುನೀತ್ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ನಾನೇ ಸ್ವತಃ ಪೋಣಿಸಿರುವ ಮಂಡಕ್ಕಿ ಹಾರ ಇದು. ಈ ಹಾರ ಮಾಡಲು 15 ದಿನಗಳ ಸಮಯ ತೆಗೆದುಕೊಂಡಿದ್ದೇನೆ.
ನನಗೆ ಸರಿಯಾಗಿ ಕಣ್ಣು ಕಾಣಲ್ಲ, ಸೊಂಟ ನೋವು ಬರುತ್ತೆ. ಆಗ ಕೆಲ ಹೊತ್ತು ನಿಲ್ಲಿಸಿ ಮತ್ತೆ ಪೋಣಿಸುತ್ತೇನೆ’’ ಪುನೀತ್ ನಿಧನರಾದಾಗಲೂ ಒಂದು ಸಣ್ಣ ಹಾರ ಮಾಡಿಕೊಂಡು ಬಂದಿದ್ದೆ. ಆದರೆ ಕಂಠೀರವ ಸ್ಟುಡಿಯೋ ಒಳಗೆ ಬಿಟ್ಟಿರಲಿಲ್ಲ. ಹಳೇ ಫೋಟೋ ಎಲ್ಲಾ ತೋರಿಸಿದಾಗ ಬಿಟ್ಟಿದ್ದರು. ನಾನು ಶಿವರಾಜ್ ಕುಮಾರ್ ಬಂದ ಮೇಲೆ ಅಪ್ಪು ಸಮಾಧಿಗೆ ಹಾರ ಹಾಕಿ ಹೋಗುತ್ತೇನೆ ಎಂದ ವೃದ್ದೆ ಹೇಳಿದ್ದಾರೆ.