ಮನಿಕೆ ಮೆಗಾ ಹಿತೆ ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ಶ್ರೀಲಂಕಾದ ಯುವ ಗಾಯಕಿ ಯೊಹಾನಿ ಇದೀಗ ಬಾಲಿವುಡ್ ಗೆ ಕಾಲಿಡಲಿದ್ದಾಳೆ!
ಹೌದು, ಅಜಯ್ ದೇವಗನ್ ನಟಿಸಿ ಇಂದ್ರ ಕುಮಾರ್ ನಿರ್ದೇಶನದಲ್ಲಿ ಹೊರಬರುತ್ತಿರುವ `ಥ್ಯಾಂಕ್ ಗಾಡ್’ ಚಿತ್ರದಲ್ಲಿ ಯೊಹಾನಿ ಮನಿಕೆ ಮೆಗಾ ಹಿತೆ ಹಿಂದಿ ಅವತರಣಿಕೆಯ ಹಾಡು ಹಾಡಲಿದ್ದಾಳೆ. ಈ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡುವ ಮೂಲಕ ಭಾರತೀಯ ಅಭಿಮಾನಿಗಳ ಹೃದಯ ಕದಿಯಲಿದ್ದಾಳೆ.
ತಾನಿಷ್ಕ್ ಬಗಾತಿ ಸಂಗೀತ ನೀಡಲಿದ್ದು, ರಶ್ಮಿ ವರ್ಗ್ ಸಾಹಿತ್ಯ ನೀಡಲಿದ್ದಾರೆ. ಹಿಂದಿಯ ಬಿಗ್ ಬಾಗ್-15ನಲ್ಲಿ ಮೊದಲ ಬಾರಿ ಭಾರತದ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ನಂತರ ಯೊಹಾನಿ ಬಾಲಿವುಡ್ ನಲ್ಲಿ ತಳವೂರುವ ಲಕ್ಷಣ ಕಂಡು ಬರುತ್ತಿದೆ.