ರಾಜ್ಯದಲ್ಲಿರೋದು ಮಂಗಳಮುಖಿ ಸರ್ಕಾರ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪದ್ಮಶ್ರೀ ಪುರಸ್ಕೃತೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೀಗೆ ಅವಮಾನ ಮಾಡಬಾರದಿತ್ತು ಸಾರ್ ಎಂದು ಸಿ.ಎಂ ಇಬ್ರಾಹಿಂಗೆ ಹೇಳಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮಂಜಮ್ಮ ಜೋಗತಿ, “ನನ್ನ ತಂದೆ ಕೂಡ ಹಿಂಗೆ ಹೇಳಿದ್ರು-ಗಂಡಾಗಿದ್ರೆ ಕೆಲ್ಸ ಕೊಡಿಸ್ತಿದ್ದೆ, ಹೆಣ್ಣಾಗಿದ್ರೆ ಮದ್ವಿ ಮಾಡಿಸ್ತಿದ್ದೆ, ಕುರುಡ ಕುಂಟ ಆಗಿದ್ರೆ ಮನಿಯಾಗ ಕೂಡ್ಸಿ ಊಟ ಹಾಕ್ತಿದ್ದೆ ಅಂದಿದ್ರು. ಇದನ್ನೂ ಓದಿ :-ಗಂಡಸೂ ಅಲ್ಲ ಹೆಂಗಸೂ ಅಲ್ಲದ ಸರ್ಕಾರ – ರಾಜ್ಯ ಸರ್ಕಾರದ ವಿರುದ್ಧ ಸಿ.ಎಂ ಇಬ್ರಾಹಿಂ ವಾಗ್ದಾಳಿ
ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮಗೆ. ಹೀಗೆ ಅವಮಾನ ಮಾಡಬಾರದಿತ್ತು ಸಾರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ :- ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ?