ನಾವು ಅಧಿಕಾರಕ್ಕೆ ಬಂದ್ರೆ ಬಿಜೆಪಿ (BJP)ಯವರನ್ನ ಜೈಲಿಗೆ ಕಳಿಸ್ತೀವಿ ಅನ್ನೋ ಹರಿಪ್ರಸಾದ್ (HARIPRASAD ) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ವಿಪಕ್ಷ ನಾಯಕನಾಗಿ ಸಿಲ್ಲಿ ಸ್ಟೇಟ್ಮೆಂಟ್ ನೀಡಿದ್ದಾರೆ. ಕಾಂಗ್ರೆಸ್ (CONGRESS)ನಲ್ಲಿರೋ ಅನೇಕರು ಜೈಲಿನ ಒಳಗಿದ್ದಾರೆ. ಇನ್ನೂ ಅನೇಕರು ಜೈಲಿಗೆ ಹೋಗಲಿದ್ದಾರೆ. ರಮೇಶ್ ಕುಮಾರ್ ಒಂದು ಮಾತು ಹೇಳಿದ್ರು. ನಾವು 3 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ ಅಂತ. ತನಿಖೆ ಮಾಡಿದ್ರೆ ಅನೇಕರು ಜೈಲಿಗೆ ಹೋಗಬೇಕಾಗಲಿದೆ. ಅದಕ್ಕಾಗಿ ಹೊಸ ಜೈಲನ್ನೇ ತೆರೆಯಬೇಕಾಗಲಿದೆ. ಅಲ್ಲಿರೋ ರೌಡಿಗಳು, ಸಮಾಜದವರು ಇವರ ಕಾಲದಲ್ಲಿ ಜೈಲನ್ನೇ ಗೆಸ್ಟ್ ಹೌಸ್ ಮಾಡಿಕೊಂಡಿದ್ರು. ಈಗ ಸಾಮಾನ್ಯ ಜೈಲಾಗಿ ಉಳಿದಿದೆ. ಜೈಲಿನಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯದಂತೆ ಕಡಿವಾಣ ಹಾಕಿದ್ದೇವೆ ಎಂದು ತಿಳಿಸಿದ್ರು.
ಇದನ್ನು ಓದಿ :- ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಡಿ.ಸಿ.ಎಂ ಜಿ.ಪರಮೇಶ್ವರ್