ಮುಂದಿನ ದಿನಗಳಲ್ಲಿ ಭೂಮಿಗೆ ಬಿಸಿಲಿನ ಬಿರುಗಾಳಿ ಅಪ್ಪಳಿಸಲಿದ್ದು, ಇದರಿಂದ ಮೊಬೈಲ್ ಫೋನ್ ಗಲ ಸಿಗ್ನಲ್, ಜಿಪಿಎಸ್, ಟೀವಿ ಚಾನೆಲ್ ಗಳಿಗೆ ಹಾನಿಯಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಬಿಸಿಲಿನ ಝಳಕ್ಕೆ ಅಟ್ಲಾಂಟಿಕಾದಲ್ಲಿ ಹಿಮಗಡ್ಡೆಗಳು ಕರಗಿದ ಆಘಾತಕಾರಿ ಘಟನೆ ಬೆನ್ನಲ್ಲೇ ವಿಜ್ಞಾನಿಗಳು ಈ ಎಚ್ಚರಿಕೆ ನೀಡಿದ್ದು, ಅತ್ಯಂತ ಬಿಸಿಯಾದ ಆವಿ ಮಾದರಿಯ ಬಿಸಿಯಾದ ಗಾಳಿ ಅತ್ಯಂತ ವೇಗವಾಗಿ ಬೀಸಲಿದ್ದು, ಇದರಿಂದ ಮನುಷ್ಯರ ಮೇಲಷ್ಟೇ ಅಲ್ಲ ತಂತ್ರಜ್ಞಾನಗಳ ಮೇಲೂ ಭಾರೀ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಬಿಸಿಯಾದ ಹಾಗೂ ಅತ್ಯಂತ ವೇಗವಾಗಿ ಬೀಸುವ ಈ ಗಾಳಿಯಿಂದ ಸ್ಯಾಟಲೈಟ್ ಟಿವಿ ಚಾನೆಲ್ ಗಳು, ಮೊಬೈಲ್ ಸಿಗ್ನಲ್, ಜಿಪಿಎಸ್ ಅಲ್ಲದೇ ವಿದ್ಯುತ್ ಘಟಕಗಳ ಮೇಲೂ ಪರಿಣಾಮ ಬೀರಲಿದ್ದು, ಹಾನಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ತಜ್ಞರು ವಿವರಿಸಿದ್ದಾರೆ.