ಬೆಳಗಾವಿ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ವಿಭಜನೆ ಆಗಬೇಕು ಎಂದು ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಜನರು ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕಾಗಿದೆ.
ಸಚಿವ ಉಮೇಶ ಕತ್ತಿ ನೇತೃತ್ವದ ತಂಡಕ್ಕೆ ನಮ್ಮ ಬೆಂಬಲವಿದೆ. ಮೂರು ಜಿಲ್ಲೆ ಆಗಬೇಕು ಎಂಬ ಬಗ್ಗೆ ನಮ್ಮ ಪಕ್ಷಾತೀತ ಬೆಂಬಲ ಇದೆ. ಈಗಾಗಲೇ ಬೆಳಗಾವಿ ತಾಲೂಕು ವಿಭಜನೆಗೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪ್ರತ್ಯೇಕ ತಾಲೂಕು ಮಾಡುತ್ತೇವೆ ಎಂದು ಹೇಳಿದ್ದಾರೆ. ಅವಧಿ ಪೂರ್ವ ವಿಧಾನಸಭೆ ಚುನಾವಣೆ ಬಂದರೇ ಎದುರಿಸಲು ನಾವು ಸಿದ್ದ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಈ ನಡುವೆ ಬೆಲೆ ಏರಿಕೆ ವಿರೋಧಿಸಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಶಾಸಕಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಧರಣಿ ನಡೆಯಿತು. ತಲೆಯ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಬೆಲೆ ಏರಿಕೆ ವಿರುದ್ಧ ಮುಂಬರುವ ದಿನಗಳಲ್ಲಿ ಹೋರಾಟವನ್ನ ಮಾಡ್ತೇವೆ.
ರಾಜ್ಯದಲ್ಲಿ ದಿಢೀರ್ ಅಂತಾ ಪೆಟ್ರೋಲ್,ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಆಗ್ತಿದೆ. ಮುಂಬರುವ ದಿನಗಳಲ್ಲಿ ಜನಸಾಮಾನ್ಯರ ಪರ ಹೋರಾಟವನ್ನ ಮಾಡ್ತೇವೆ ಎಂದು ಆಗ್ರಹಿಸಿದ್ರು. ಬಿಜೆಪಿ ಈ ವಿಷಯವನ್ನು ಬೇರೆಡೆ ಸೆಳೆಯುವ ಯತ್ನ ಮಾಡ್ತಿದೆ ಎಂದು ದೂರಿದ್ರು. ದೇಶದಲ್ಲೂ ಗೊಬ್ಬರ, ಮೆಡಿಸಿನ್, ಪೆಟ್ರೋಲ್, ಡಿಸೇಲ್, ಬಸ್ ಟಿಕೆಟ್ ದರ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇಂತಹ ಸಂದರ್ಭಗಳಲ್ಲಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಬೇರೆ ಬೇರೆ ವಿಚಾರಗಳನ್ನ ಬಿಜೆಪಿ ತರುತ್ತಿದೆ ಎಂದು ಅಕ್ರೋಶ ಹೊರ ಹಾಕಿದ್ರು.
ಇದನ್ನು ಓದಿ : – ರಾಜ್ಯದಲ್ಲಿರೋದು ರಿಮೋಟ್ ಸರ್ಕಾರ – ಸಿಎಂ ಬೊಮ್ಮಾಯಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ