ಕೆಪಿಸಿಸಿ (KPCC) ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ (MB P ಅಧಿಕಾರ ಸ್ವೀಕರಿಸಿದ್ದಾರೆ. ಎಂ.ಬಿ ಪಾಟೀಲ್ಗೆ ಕಾಂಗ್ರೆಸ್ ಬಾವುಟ ನೀಡಿ ರಣದೀಪ್ ಸುರ್ಜೇವಾಲ (Randeep Surjewala)ಪ್ರಚಾರ ಸಮಿತಿ ಜವಾಬ್ದಾರಿ ನೀಡಿದ್ದಾರೆ. ನನಗೆ ಜವಾಬ್ದಾರಿ ನೀಡಿದ ಕಾಂಗ್ರೆಸ್ ಹೈಕಮಾಂಡ್‌ಗೆ ಧನ್ಯವಾದ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವ್ರು ಯಾರೂ ಭಾಗಿ ಆಗಿರಲಿಲ್ಲ. ಆದ್ರೆ ಈಗ ನಮಗೆ ದೇಶ ಭಕ್ತಿ ಬಗ್ಗೆ ಹೇಳಿಕೊಡಲು ಬರುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ (KPCC) ನೂತನ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಕೊರೊನಾ ವೇಳೆ ಚಿಕಿತ್ಸೆ ಸಿಗದೆ ಸಾವಿರಾರು ಜನರು ಮೃತಪಟ್ಟಿದ್ದಾರೆ. ಕೋವಿಡ್ ನಿರ್ವಹಣೆ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ ಎಂದು ಆರೋಪಿಸಿದ್ರು. ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿತ್ತು. ರಾಜ್ಯದ ಏಕೈಕ ಮಹಿಳಾ ವಿವಿಯನ್ನ ಮುಚ್ಚಲು ಸರ್ಕಾರ ಯತ್ನಿಸ್ತಿದೆ. ಜನ ವಿರೋಧಿಯಾಗಿರುವ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕಿದೆ. 150 ಸೀಟ್ ಗೆದ್ದು ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಶಪಥ ಮಾಡಿದ್ದಾರೆ.
ಇದೇ ವೇಳೆ ಮಾತಾನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ (DKS) ನಾವು ಹಿಂದೂ, ನಾವು ಮುಂದು ಅನ್ನೋದು ಬಿಜೆಪಿಯವರ ನೀತಿ. ಧರ್ಮದ ಆಧಾರದಲ್ಲಿ ಒಡೆಯುವ ಕೆಲಸ ಮಾಡಲಾಗ್ತಿದೆ. ಕೆಂಗಲ್ ಹನುಮಂತಯ್ಯ ಸಿಎಂ ಆಗಿದ್ದಾಗ ಬಿಜೆಪಿ ಹುಟ್ಟಿತ್ತೋ ಇಲ್ವೋ ಗೊತ್ತಿಲ್ಲ. ಈ ಹಿಂದೆ ಪ್ರತಿದಿನ ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಮಹಾಭಾರತ, ರಾಮಾಯಣ ಪ್ರಸಾರ ಮಾಡುತ್ತಿದ್ದರು. ನಾನು ಕೂಡ ಅದರಿಂದ ಪ್ರೇರಿತನಾಗಿದ್ದೆ. ಮಹಾಭಾರತದ ಶ್ಲೋಕ ಹೇಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ರಾಜ್ಯದಲ್ಲಿ ಅನೈತಿಕ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ರು. ಬಿಎಸ್ ವೈ ಕೋಟಿ ಕೋಟಿ ಹಣ ಕೊಟ್ಟು ಅಪರೇಷನ್ ಕಮಲ ಮಾಡಿದ್ರು. ಈ ಅನೈತಿಕ ಸರ್ಕಾರಕ್ಕೆ ಬಡವರ ಬಗ್ಗೆ, ಯುವಕರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದ್ರು. ಬಿಎಸ್ ವೈ ಮನೆಯಲ್ಲೆ ಭ್ರಷ್ಟಾಚಾರ ನಡೀತಾ ಇದೆ ಎಂದು ಯತ್ನಾಳ್ ಹೇಳಿದ್ರು. ವಿಶ್ವನಾಥ್ ಕೂಡ ವಿಜಯೇಂದ್ರ ಮೇಲೆ ಆರೋಪ ಮಾಡಿದ್ರು. ಪ್ರಧಾನಿ ಮೋದಿ ಸಿದ್ರಾಮಯ್ಯ ಸರ್ಕಾರ 10% ಸರ್ಕಾರ ಅಂದಿದ್ರು ತಾಕತ್ತಿದ್ರೆ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ರು. ಮಿಸ್ಟರ್ ಬೊಮ್ಮಾಯಿ ಮಾನ ಮಾರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ : CONGRESS- ಎಂ ಬಿ ಪಾಟೀಲ್ ಮುಂದಿರೋ ಸವಾಲುಗಳೇನು ಗೊತ್ತಾ…