ಗುಜರಾತ್ ಚುನಾವಣೆ (Gujrath election) ಸೋಲು ಗಮನಿಸಿದಾಗ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಾಸಕ ಹೆಚ್ ಕೆ ಪಾಟೀಲ್ (HK.Patil) ಹೇಳಿದ್ದಾರೆ. ಗದಗ (Gadag) ದಲ್ಲಿ ಮಾತನಾಡಿದ ಅವರು ನಮ್ಮ ನಿರೀಕ್ಷೆ ಗೆಲ್ಲುತ್ತೀವಿ, ಸರಕಾರ ಮಾಡ್ತೀವಿ ಅನ್ನೋದು ಇರಲಿಲ್ಲ. ಇಷ್ಟು ಕಡಿಮೆ ಮಟ್ಟದ ಪ್ರತಿಫಲ ನಮಗೆ ದೊರಕುತ್ತದೆ, ಈ ರೀತಿ ಸೋಲು ಆಗತ್ತೆ ಅಂತಾ ಅನಿಸಿರಲಿಲ್ಲ.
ನಾವು ಅಷ್ಟು ಗೆಲ್ತೀವಿ , ಇಷ್ಟು ಗೆಲ್ತೀವಿ ಅಂತಾ ಅಲ್ಲ ಮಾಧ್ಯಮದವರು ಕಾಂಗ್ರೆಸ್ 65, 68, 78 ಬರತ್ತೆ ಅಂತಾ ಸಮೀಕ್ಷೆ ವರದಿ ಕೊಟ್ಟಿದ್ರು. ಅದಕ್ಕಿಂತಲೂ ಇಷ್ಟು ಕಡಿಮೆ ಆಗಬೇಕಾದರೆ ಹೇಗೆ ಎಲ್ಲಾ ಕ್ಯಾಲ್ಕುಲೇಶನ್ ತಪ್ಪಾಗತ್ತೆ ಎಂದು ಪ್ರಶ್ನಿಸಿದ್ರು. ಎಲ್ಲರ ಲೆಕ್ಕಾಚಾರ ಇಷ್ಟು ತಪ್ಪೋಹಾಗೆ ಹೇಗೆ ಆಯಿತು ಅನ್ನೋದನ್ನ ರಾಜಕಾರಣದಲ್ಲಿ ‘ ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ ಇರೋರು ಅವಲೋಕನೆ ಮಾಡಬೇಕಾಗಿದೆ. ಹಿಮಾಚಲ ಪ್ರದೇಶ (Himachal pradesh) ದಲ್ಲಿ ಮಾಧ್ಯಮದವರು ಏನು ಅಂದಾಜು ಮಾಡ್ತಾ ಇದ್ದೀರಿ ಒಂದು ಹೆಚ್ಚು ಒಂದು ಕಡಿಮೆ ಅಷ್ಟೇ ಇದೆ. ಹಿಮಾಚಲ ಪ್ರದೇಶದಲ್ಲಿ ಮಾಧ್ಯಮ ಸರ್ವೆ ಸರಿಯಾಗಿದೆ, ಕಾಂಗ್ರೆಸ್ ಸರಕಾರ ಮಾಡತ್ತೆ ಎಂದು ಹೇಳಿದರು. ಇದನ್ನು ಓದಿ : – ಹಿಮಾಚಲ ಪ್ರದೇಶಕ್ಕೆ ಮಹಿಳಾ ಮುಖ್ಯಮಂತ್ರಿ ಸಾಧ್ಯತೆ..?
ಇದೇ ವೇಳೆ ಗುಜರಾತ್ ಚುನಾವಣೆ ಪರಿಣಾಮ ಕರ್ನಾಟಕದಲ್ಲಿ ಆಗೋದಿಲ್ಲ. ಗುಜರಾತೇ ಬೇರೆ, ಕರ್ನಾಟಕಾ (Karnataka ) ನೇ ಬೇರೆ ಎಂದು ಹೇಳಿದ್ರು . ಇವಿಎಮ್ ಮೆಶೀನ್ (EVM) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಚುನಾವಣೆ ಆಯೋಗಕ್ಕೆ ಒಂದು ಮಾತು ಹೇಳೋದಕ್ಕೆ ಬಯಸುತ್ತೇನೆ. 90 ಪರ್ಸೆಂಟ್ ಗಿಂತ ಮೇಲೆ ಬಂದ್ರೆ ರಿಟರ್ನಿಂಗ್ ಆಫೀಸರ್ ತಕ್ಷಣ ರಿಸಲ್ಟ್ ಕೊಡೋಕೆ ಅಲೊ ಮಾಡಲ್ಲ. ಈ ರೀತಿಯಾದ ಪರಿಣಾಮ ಬಂದಾಗ ಸ್ವಲ್ಪ ಮಟ್ಟಿಗೆಯಾದರೂ ಅವಲೋಕನೆ ಮಾಡತಕ್ಕಂತಹ ಸಾಮಾನ್ಯ ಪರಿಜ್ಞಾನ ಚುನಾವಣೆ ಆಯೋಗಕ್ಕೆ ಇರಬೇಕು ಎಂದು ಚುನಾವಣೆ ಆಯೋಗದ ಮೇಲೆ ಹರಿಹಾಯ್ದಿದ್ದಾರೆ. ಚುನಾವಣಾ ಪರಿಸ್ಥಿತಿಗೆ ಹೊಂದಾಣಿಕೆ ಮಾಡ್ಕೋತೇನೆ ಅಂತಾ ಭಾವಿಸಬೇಕಾಗುತ್ತದೆ. ಪ್ರಜಾಪ್ರಭುತ್ವ ಒಳಿತಿಗಾಗಿ ಗುಜರಾತ್ ಚುನಾವಣೆಯನ್ನ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಲೇಬೇಕು ಎಂದು ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಇದನ್ನು ಓದಿ : – ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಗೊತ್ತಾ…?