ಭಾರತ ವಿರುದ್ಧ ಆರೋಪ ಮಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ವಿಶ್ವಸಂಸ್ಥೆಯಲ್ಲಿ ಚಳಿ ಬಿಡಿಸಿದ ಐಎಎಸ್ ಅಧಿಕಾರಿ ಸ್ನೇಹಾ ದುಬೆ ಈ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.
ಅಲ್ಪಾಸಂಖ್ಯಾತರನ್ನು ಕೆರಳಿಸಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಪಾಕಿಸ್ತಾನ, ಭಯೋತ್ಪಾದಕರಿಗೆ ಬೆಂಬಲ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಸ್ನೇಹಾ ದುಬೆ ವಿಶ್ವಸಂಸ್ಥೆಯಲ್ಲಿ ಬೆಂಕಿಯುಂಡೆಯಂತಹ ಭಾಷಣ ಮಾಡಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆವರಿಳಿಸಿದ್ದರು.
ಭಾರತದಲ್ಲಿ ಉಗ್ರರ ಚಟುವಟಿಕೆಗೆ ಕುಮ್ಮಕ್ಕು ನೀಡುವುದು ಹಾಗೂ ನೆರೆಯ ದೇಶಗಳಲ್ಲಿ ಅಶಾಂತಿ ಉಂಟು ಮಾಡುವುದು ಪಾಕಿಸ್ತಾನದ ರಾಜಕೀಯದಿಂದ ಭಾರತ ಮಾತ್ರವಲ್ಲ ಇಡೀ ಜಗತ್ತು ನರಳುತ್ತಿದೆ ಎಂದು ದುಬೆ ಗಂಭೀರ ಆರೋಪ ಮಾಡಿದ್ದರು.
ಯಾರೀಕೆ ಸ್ನೇಹಾ ದುಬೆ?
ಸ್ನೇಹಾ ದುಬೆ 2012ರ ಐಎಎಸ್ ಬ್ಯಾಚ್ ಆಗಿದ್ದಾರೆ. ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ. 2014ರಲ್ಲಿ ಮ್ಯಾಡ್ರಿಡ್ ನಲ್ಲಿ ಭಾರತದ ರಾಯಭಾರಿ ಆಗಿ ನೇಮಕಗೊಂಡಿದ್ದರು. ವಿಶ್ವಸಂಸ್ಥೆ ಸಂಸತ್ ನಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡ ಭಾರತದ ಮೊದಲಿಗರಾಗಿದ್ದಾರೆ. ಜೆಎನ್ ಯುನಲ್ಲಿ ಎಂಎ ಮತ್ತು ಎಂಫಿಲ್ ಪದವಿ ಪಡೆದಿದ್ದಾರೆ. ಗೋವಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸ್ನೇಹಾ ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿ ಗಳಿಸಿದ್ದು, ಕುಟುಂಬದಲ್ಲಿ ನಾಗರಿಕ ಸೇವಾ ಉದ್ಯೋಗ ಪಡೆದ ಮೊದಲಿಗಳಾಗಿದ್ದಾಳೆ.