ಬೆಳಗಾವಿ(BELAGAVI ) ಯಲ್ಲಿ ನಾಡದ್ರೋಹಿ ಎಂಇಎಸ್ (MES) ಸಂಘಟನೆ ಪುಂಡಾಟ ಮುಂದುವರಿದಿದೆ. ಮರಾಠಿಯಲ್ಲಿ ದಾಖಲೆ ಪತ್ರ ನೀಡಲು ಆಗ್ರಹಿಸಿ ಮರಾಠಿಗರು ಸರ್ದಾರ್ ಹೈಸ್ಕೂಲ್ ಮೈದಾನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಮೆರವಣಿಗೆ ವಿಚಾರವಾಗಿ ಪೊಲೀಸ್ ಅಧಿಕಾರಿಗಳ ಜತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಸರ್ದಾರ್ (SARDHAR ) ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ : – ಮಹಾ ರಾಜಕೀಯ ಬಿಕ್ಕಟ್ಟು ನಡುವೆ ಸಂಜಯ್ ರಾವತ್ ಗೆ ED ಸಮನ್ಸ್
ಎಂಇಎಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಡಿಸಿಪಿ ರವೀಂದ್ರ ಗಡಾದ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದ್ದು ಎಂಇಎಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಡ್ರೋನ್ (Drone ) ಕಣ್ಗಾವಲು ಇಡಲಾಗಿದೆ.
ಇದನ್ನೂ ಓದಿ : – ಮಹಾರಾಷ್ಟ್ರ ಬಿಕ್ಕಟ್ಟು- ಏಕನಾಥ್ ಶಿಂಧೆ ಟೀಂನ ಅನರ್ಹತೆ ನೊಟೀಸ್- ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ