ಡೆಬಿಟ್ ಕಾರ್ಡ್ (Debit card) ಮಾದರಿಯಲ್ಲಿರುವ ಎನ್‌ಸಿಎಂಸಿ ಕಾರ್ಡ (NCMC Card) ನ್ನು ದೇಶದ ಯಾವುದೇ ಮೆಟ್ರೋ, ಬಸ್‌ನಲ್ಲಿ ಬಳಸಬಹುದು. ತಾಂತ್ರಿಕ ಕಾರಣಗಳಿಂದ ಎನ್‌ಸಿಎಂಸಿ ಜಾರಿ ವಿಳಂಬವಾಗಿದೆ. ಆದರೆ, ಇದೀಗ ಎಲ್ಲ ಮೆಟ್ರೋ ನಿಲ್ದಾಣ (Metro station) ಹಾಗೂ ಇತರೆಡೆಗಳಲ್ಲಿ ಇದರ ಬಳಕೆಗೆ ಅನುವಾಗುವಂತೆ ತಂತ್ರಜ್ಞಾನ ಅಳವಡಿಕೆ ಕಾರ್ಯ ನಡೆದಿದೆ.
ಜತೆಗೆ ಕಾರ್ಡ್ ದರ ನಿಗದಿ ಬಗ್ಗೆ ಅಂತಿಮ ಹಂತದಲ್ಲಿದೆ. ಹೊಸ ವರ್ಷದಲ್ಲಿ ಇದನ್ನು ನಮ್ಮ ಮೆಟ್ರೋ ಬಳಕೆದಾರರಿಗೆ ಪರಿಚಯಿಸುತ್ತಿದೆ. ಡೆಬಿಟ್ ಕಾರ್ಡ್ ಮಾದರಿಯಲ್ಲಿರುವ ಎನ್‌ಸಿಎಂಸಿ ಕಾರ್ಡನ್ನು ದೇಶದ ಯಾವುದೇ ಮೆಟ್ರೋ, ಬಸ್ (Bus) ನಲ್ಲಿ ಬಳಸಬಹುದು. ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಬಳಕೆ ಮಾಡಿದರೂ, ಒಂದೇ ಖಾತೆಗೆ ಹಣ ಜಮೆ ಆಗುತ್ತದೆ. ಅಲ್ಲಿಂದ ಆಯಾ ಸಂಸ್ಥೆ ಒಪ್ಪಂದ ಮಾಡಿಕೊಂಡ ಬ್ಯಾಂಕ್‌ಗೆ ಹಣ ಜಮಾ ಆಗುತ್ತದೆ. ಮೊದಲ ಹಂತದಲ್ಲಿ 25 ಸಾವಿರ ಕಾರ್ಡನ್ನು ಜನತೆಗೆ ತಲುಪಿಸಲು ಸಿದ್ಧತೆ ನಡೆದಿದೆ.
ಇದನ್ನು ಓದಿ :- ಜಾಮಿಯಾ ಬಳಿಕ ದೆಹಲಿ ವಿವಿಗೆ ಕಾಲಿಟ್ಟ ಮೋದಿ ಸಾಕ್ಷ್ಯಚಿತ್ರ ವಿವಾದ