ಸಚಿವ ಅಶ್ವಥ್ ನಾರಾಯಣ್ (Ashwath narayan) ಇಂದು ರಾಮನಗರ (Ramanagara) ಪ್ರವಾಸ ಕೈಗೊಂಡಿದ್ದಾರೆ. ರಾಮನಗರದ ನೆರೆ ಪೀಡಿತ ಪ್ರದೇಶಗಳಿಗೆ ಸಚಿವ ಅಶ್ವಥ್ ನಾರಾಯಣ್ ಭೇಟಿ ನೀಡಿದ್ದಾರೆ. ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು.
ಇಂದು ರಾಮನಗರ, ಚನ್ನಪಟ್ಟಣ (Channapatna) , ಮಾಗಡಿ ತಾಲ್ಲೂಕುಗಳಿಗೆ ಸಚಿವ ಅಶ್ವಥ್ ನಾರಾಯಣ್ ಭೇಟಿ ನೀಡಿದ್ದಾರೆ ನಿನ್ನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಕುಟುಂಬಕ್ಕೆ ಸಚಿವರು ಸಾಂತ್ವನ ಹೇಳಿದ್ದಾರೆ. ನಂತರ, ಹಂಚಿಕುಪ್ಪೆ, ಕುದೂರು, ಸೇರಿದಂತೆ ಹಲವು ಗ್ರಾಮಗಳಿಗೆ ಸಚಿವರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಸಚಿವರು ಪರಿಹಾರ ನೀಡಿದ್ದಾರೆ. ಇದನ್ನು ಓದಿ : – ರಾಜ್ಯಾದ್ಯಂತ ಬಾರಿ ಮಳೆಗೆ ಜನ ಜೀವನ ಅಸ್ತ ವ್ಯಸ್ತ- ಅಪಾಯ ಮಟ್ಟ ಮೀರಿದ ತುಂಗಭದ್ರಾ ಜಲಾಶಯ
ಮಧ್ಯಾಹ್ನ ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯದ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಹಿನ್ನಲೆ ಸಂಜೆ ಹೆದ್ದಾರಿ ಪ್ರಾಧಿಕಾರದವರ ಜೊತೆ ಸಚಿವ ಅಶ್ವಥ್ ನಾರಾಯಣ್ ಸಭೆ ನಡೆಸಲಿದ್ದಾರೆ.
ಇದನ್ನು ಓದಿ : – ವಿಜಯನಗರದ ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ – 403 ಅಡಿ ಎತ್ತರದ ಧ್ವಜ ಸ್ಥಂಬ ಸ್ಥಾಪನೆ