ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆಯ ಬಳಿ ಖಾಸಗಿ ಎಸ್ವಿಟಿ ಬಸ್ ಪಲ್ಟಿ ಆಗಿ ಭೀಕರ ಅಪಘಾತಕ್ಕೆ ಸಂಭವಿಸಿದಂತೆ ಮಾತನಾಡಿದ ಸಾರಿಗೆ ಸಚಿವ ಶ್ರೀ ರಾಮುಲು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಸ್ ಫಿಟ್ ನೆಟ್ ಸೇರಿದಂತೆ ಎಲ್ಲ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತರ ಕುಟುಂಬಸ್ಥ ರಿಗೆ, ಗಾಯಾಳುಗಳಿಗೆ ಸಹಾಯ ಮಾಡ್ತೇವೆ. RTO ಅಧಿಕಾರಿಗಳ ತಪ್ಪಿದ್ದರೂ ಕೂಡಲೇ ಕ್ರಮಕೈಗೊಳ್ತೇವೆ. ಓವರ್ ಲೊಡ್ ಮತ್ತು ಅತಿವೇಗವೇ ಘಟನೆಗೆ ಕಾರಣವಾಗಿದೆ. ಪ್ರೈವೇಟ್ ವಾಹನಕ್ಕೆ ಕಡಿವಾಣ ಹಾಕಿ ಸರ್ಕಾರಿ ಬಸ್ ಬಿಡೋ ಕೆಲಸ ಮಾಡ್ತೇವೆ. ಮುಖ್ಯಮಂತ್ರಿಗಳಿಗೆ ಘಟನೆ ಬಗ್ಗೆ ವಿವರಣೆ ನೀಡಿದ್ದೇನೆ. ಪರಿಹಾರ ಕೋಡೋ ವಿಚಾರದಲ್ಲಿ ಸಿಎಂ ಜೊತೆಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ರು.
0 112 Less than a minute