ದಾವಣಗೆರೆ : ಕೊರೊನಾದಿಂದ ಮೃತಪಟ್ಟ ಕಡು ಬಡ ಕುಟುಂಬದ ಅತ್ಯ ಸಂಸ್ಕಾರಕ್ಕೆ 9 ಸಾವಿರ ರೂಪಾಯಿ ಸಹಾಯಧನವನ್ನು ಶಾಸಕ ಎಂ ಪಿ ರೇಣುಕಾಚಾರ್ಯ ಘೋಷಣೆ ಮಾಡಿದ್ದಾರೆ. ಹೊನ್ನಾಳಿಯ ಜನತೆಯ ಅನುಕೂಲಕ್ಕಾಗಿ ಸಿಎಂ ರಾಜಕೀಯ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಕೋವಿಡ್ ಸಮಯದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಮ್ಮ ಕಡೆಯಿಂದ ಹೊನ್ನಾಳಿಯ ಜನತೆಗೆಗಾಗಿ ಒಟ್ಟು ನಾಲ್ಕು ಸಾವಿರ ಪಿಪಿ ಕಿಟ್ ಗೆ ಹಾಗೂ ಐದು ಸಾವಿರ ಮೃತ ಕುಟುಂಬಕ್ಕೆ ಸಹಾಯ ಧನ ನೀಡುವುದಾಗಿ ಘೋಷಿಸಿದ್ದು, ಶಿವಮೊಗ್ಗದಲ್ಲಿನ ತಮ್ಮ ಒಡೆತನದಲ್ಲಿರುವ ಬಾಪೂಜಿ ಆಯುರ್ವೇದಿಕ್ ಕಾಲೇಜು ಹಾಗೂ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಿದ್ದಾರೆ.
ಇದಲ್ಲದೆ ರೇಣುಕಾಚಾರ್ಯ ಅವರು ತಮ್ಮ ಒಂದು ಅಂಬ್ಯೂಲೆನ್ಸ್ ಸಾರ್ವಜನಿಕ ಸೇವೆಗೆ ಮತ್ತು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ.
ಪ್ರತಿನಿತ್ಯ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸಿ ಕೊರೊನಾ ಸೋಂಕಿತರಿಗೆ, ಸಾರ್ವಜನಿಕರಿಗೆ ಬೆಳಗಿನ ಉಪಹಾರ ನೀಡುತ್ತಿರುವ ಶಾಸಕ ರೇಣುಕಾಚಾರ್ಯ ಅವರ ಈ ಕೊಡುವೆ ಹೊನ್ನಾಳಿ ಜನತೆಗೆ ಮೆಚ್ಚುಗೆ ವ್ಯಕ್ತಪಡಿಸುವಂತಾಗಿದೆ.