ಪಾವಗಡದ ಪಳವಳ್ಳಿ ಕಟ್ಟೆ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು , ರಾಜ್ಯದ ಜನತೆ ಮರುಗುವಂತೆ ಮಾಡಿದೆ. ಬಸ್ ನಲ್ಲಿದ್ದ ಹಲವು ವಿದ್ಯಾರ್ಥಿಗಳು ಅಪಘಾತದಲ್ಲಿ ಗಾಯಗೊಂಡಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. 40 ಕ್ಕೂ ಹೆಚ್ಚು ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 7 ಗಾಯಾಳುಗಳಿಗೆ ವಿಕ್ಟೋರಿಯಾ, ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ದುರಂತ ಸಂಭವಿಸಿದ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಮೃತಪಟ್ಟಿದ್ದರು. ಚಿಕಿತ್ಸೆ ಫಲಿಸದೆ ರಾತ್ರಿ ವಿಕ್ಟೋರಿಯಾದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಸಾರಿಗೆ ವಿಭಾಗದಲ್ಲಿ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸಾರಿಗೆ ವಿಚಾರದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಎಸ್.ವಿ.ಟಿ ಬಸ್ ಚಾಲಕನ ಅಜಾಗರೂಕತಯೇ ಬಸ್ ಅಪಘಾತಕ್ಕೆ ಮೊದಲ ಕಾರಣ ಎಂದು ಹೇಳಲಾಗಿದೆ. ತಿರುವು ರಸ್ತೆಯಲ್ಲಿ ಅತಿ ವೇಗವಾಗಿ ಬಸ್ ಚಾಲನೆ ಮಾಡಲಾಗಿದೆ. ನಿಧಾನವಾಗಿ ಬಸ್ ಓಡಿಸುವಂತೆ ಪ್ರಯಾಣಿಕರು ಹೇಳಿದ್ದರೂ ವೇಗದ ಚಾಲನೆ ಮಾಡಲಾಗಿದೆ. ಕಂಟ್ರೋಲ್ ಸಿಗದೆ ಬಸ್ ಪಲ್ಟಿ ಆಗಿದೆ. ಈ ಮಧ್ಯೆ, ಚಾಲಕ ಬಸ್ ಓಡಿಸುವಾಗ ಮೊಬೈಲ್ ಬಳಸುತ್ತಿದ್ದ ಎಂದೂ ಹೇಳಲಾಗಿದೆ. ಒಂದು ಕೈಯಲ್ಲಿ ಮೊಬೈಲ್, ಮತ್ತೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಡ್ರೈವ್ ಮಾಡುತ್ತಿದ್ದ. ಚಾಲನಿಂದಲೇ ಬಸ್ ಅಪಘಾತ ವಾಗಿದೆ ಎಂದು ರೈಲ್ವೆ ಕಾಮಗಾರಿ ಕೆಲಸ ಮಾಡಲು ಬರುತ್ತಿದ್ದ ಪ್ರತ್ಯಕ್ಷದರ್ಶಿ ರಘು ಹೇಳಿದ್ದಾರೆ.
0 105 1 minute read